ಪೆರ್ಲ: ಪೆರ್ಲ ಪೇಟೆಯ ಅಂಗಡಿಯೊಂದಕ್ಕೆ ನುಗ್ಗಿ ಮಾಲಿಕಗೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿರುವ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಮೂವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಪೆರ್ಲ ನಿವಾಸಿಗಳಾದ ಗಣೇಶ್, ಅವಿನಾಶ್ ಸೇರಿದಂತೆ ಮೂವರಿಗೆ ಈ ಕೇಸು. ಪುತ್ತೂರು ತಾಲೂಕಿನ ಬೆಟ್ಟಂಪಾಡಿ ನಿವಾಸಿ, ಪೆರ್ಲದಲ್ಲಿಬಟ್ಟೆ ಅಂಗಡಿ ನಡೆಸುತ್ತಿರುವ ಕೆ.ಎಂ. ಮುಹಮ್ಮದ್ ಅಶ್ರಫ್ (45) ಅವರ ಮೇಲೆ ಹಲ್ಲೆ ನಡೆದಿದ್ದು, ಅವರ ದೂರಿನ ಮೇರೆಗೆ ಕೇಸು ದಾಖಲಾಗಿದೆ.
ಈ ಮಧ್ಯೆ ಅಂಗಡಿ ಮಾಲಿಕ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿರುವ ಬಗ್ಗೆ ಯುವಕ ಗಣೇಶ್ ದೂರಿದ್ದು, ಗಂಭೀರ ಗಾಯಗೊಂಡ ಇವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವತಿಯನ್ನು ಮತಾಂತರಕ್ಕೆ ಯತ್ನಿಸಲಾಗುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಪ್ರಶ್ನಿಸಲು ತೆರಳಿದ್ದ ಸಂದರ್ಭ ತನಗೆ ಕಬ್ಬಿಣದ ಸಲಾಕೆಯಿಂದ ಥಳಿಸಿ ಗಾಯಗೊಳಿಸಿರುವುದಾಗಿ ಗಾಯಾಳು ದೂರಿದ್ದಾರೆ.

