ಕಾಸರಗೋಡು: ಗಂಟಲಲ್ಲಿ ಎದೆಹಾಲು ಸಿಲುಕಿದ ಪರಿಣಾಮ ಮೂರು ತಿಂಗಳ ಗಂಡು ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ಕಾಸರಗೋಡು ನೆಲ್ಲಿಕುಂಜೆ ಕಸಬಾ ತಾಯಲ್ ಹೌಸ್ ನಿವಾಸಿ ಶಾಜಹಾನ್-ಆಯಿಷಾ ದಂಪತಿ ಪುತ್ರ ತ್ವಾಹಾ ಅಬ್ದುಲ್ಲ ಸಾವನ್ನಪ್ಪಿದ ಮಗು.
ಮಂಗಳವಾರ ರಾತ್ರಿ ತಾಯಿ ಎದೆಹಾಲು ಉಣಿಸಿ ತೊಟ್ಟಿಲಲ್ಲಿ ಮಲಗಿಸಿದ್ದು, ಬುಧವಾರ ನಸುಕಿಗೆ ಮಗು ಚಲನರಹಿತವಾಗಿರುವುದನ್ನು ಗಮನಿಸಿದ ಮನೆಯವರು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಮಗುವಿನ ಆರೋಗ್ಯ ತಪಾಸಣೆ ನಡೆಸಿದಾಗ ಮಗು ಮೃತಪಟ್ಟಿರುವುದನ್ನು ದೃಢಪಡಿಸಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಎದೆಹಾಲು ಸರಿಯಾಗಿ ಗಂಟಲಲ್ಲಿ ಇಳಿಯದೆ ಸಿಲುಕಿಕೊಂಡಿರುವುದರಿಂದ ಉಸಿರುಗಟ್ಟಿ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. ಮರಣೋತ್ತರ ವರದಿ ನಂತರ ಸಾವಿನ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಸಹಜ ಸವಿನ ಬಗ್ಗೆ ನಗರಠಾನೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

