HEALTH TIPS

ಮಧ್ಯಪ್ರಾಚ್ಯ ಸಂಘರ್ಷ| ಷರತ್ತುಗಳನ್ನು ಪೂರೈಸುವುದು ಯುದ್ಧ ಕೊನೆಗೊಳಿಸುವ ಏಕೈಕ ಮಾರ್ಗ: ಇರಾನ್

 ಟೆಹರಾನ್ : ಇರಾನ್‍ನ ಷರತ್ತುಗಳನ್ನು ಪೂರೈಸುವುದು ಯುದ್ಧವನ್ನು ಕೊನೆಗೊಳಿಸುವ ಏಕೈಕ ಮಾರ್ಗವಾಗಿದೆ ಎಂದು ಇರಾನ್ ರಕ್ಷಣಾ ಇಲಾಖೆಯ ವಕ್ತಾರ ರೆಝ ತಲೈ-ನಿಕ್ ಶನಿವಾರ ಹೇಳಿದ್ದಾರೆ.

ಇನ್ನಷ್ಟು ಉಲ್ಬಣಗೊಳ್ಳುವುದನ್ನು ತಪ್ಪಿಸಲು ಅಮೆರಿಕ ಇರಾನ್‍ನ ಷರತ್ತುಗಳನ್ನು ಒಪ್ಪಿಕೊಳ್ಳಬೇಕು. 


ಮುಖಾಮುಖಿಮುಂದುವರಿದರೆ ಅಮೆರಿಕ ಮತ್ತದರ ಮಿತ್ರರಿಗೆ ಮತ್ತಷ್ಟು ನಷ್ಟಕ್ಕೆ ಕಾರಣವಾಗುತ್ತದೆ. ಅಮೆರಿಕ ಮತ್ತು ಇಸ್ರೇಲ್ ಶತ್ರುಗಳಿಗೆ ತಾವು ಹೇರಿದ ಯುದ್ಧದಿಂದ ಹೊರಬರುವ ಏಕೈಕ ಮಾರ್ಗವೆಂದರೆ, ಯುದ್ಧಭೂಮಿಯಲ್ಲಿ ಮತ್ತು ರಾಜತಾಂತ್ರಿಕತೆಯಲ್ಲಿ, ಇರಾನ್ ಜನರ ಬೇಡಿಕೆಗಳಿಗೆ ಒಪ್ಪುವುದಾಗಿದೆ ಎಂದವರು ಹೇಳಿದ್ದಾರೆ.

ಈ ಮಧ್ಯೆ, ಟೆಹ್ರಾನ್‌ಗೆ ಭೇಟಿ ನೀಡಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಇರಾನ್ ಸಂಸತ್ತಿನ ಸ್ಪೀಕರ್ ಮುಹಮ್ಮದ್ ಬಾಘೆರ್ ಘಾಲಿಬಾಫ್ `ಅಮೆರಿಕ ಅಧ್ಯಕ್ಷ ಟ್ರಂಪ್ ಯುದ್ಧವನ್ನು ಪುನರಾರಂಭಿಸಿದರೆ ಇರಾನ್‍ನಿಂದ ಪ್ರಬಲ ಪ್ರತಿಕ್ರಿಯೆ ಎದುರಾಗಲಿದೆ. ಕದನ ವಿರಾಮದ ಸಂದರ್ಭದಲ್ಲಿ ನಾವು ನಮ್ಮ ಸಶಸ್ತ್ರ ಪಡೆಗಳನ್ನು ಪುನರ್ನಿಮಿಸಿದ್ದೇವೆ ಎಂದು ಹೇಳಿದ್ದಾರೆ.

ಅಮೆರಿಕದ ಅತಿಯಾದ ಬೇಡಿಕೆಗಳು ಶಾಂತಿ ಮಾತುಕತೆಗೆ ಅಡ್ಡಿಯಾಗುತ್ತಿವೆ ಎಂದು ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಶನಿವಾರ ಹೇಳಿದ್ದಾರೆ.

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅರಾಘ್ಚಿ `ಇರಾನ್ ವಿರುದ್ಧ ಅಮೆರಿಕದ ರಾಜತಾಂತ್ರಿಕತೆಯ ಪುನರಾವರ್ತಿತ ದ್ರೋಹಗಳು ಮತ್ತು ವಿರೋಧಾತ್ಮಕ ನಿಲುವು, ಪುನರಾವರ್ತಿತ ಅತಿಯಾದ ಬೇಡಿಕೆಯ ಹೊರತಾಗಿಯೂ ಇರಾನ್ ರಾಜತಾಂತ್ರಿಕ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ' ಎಂದು ಹೇಳಿರುವುದಾಗಿ ಇಲಾಖೆಯ ಮೂಲಗಳು ತಿಳಿಸಿವೆ.

ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು:

* ಇರಾನ್ ಮೇಲೆ ದಾಳಿ ನಡೆಸುವುದನ್ನು ಅಮೆರಿಕ ಪರಿಗಣಿಸುತ್ತಿರುವುದಾಗಿ ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ಆಕ್ಸಿಯೋಸ್ ಮತ್ತು ಸಿಬಿಎಸ್ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

* ಪಾಕಿಸ್ತಾನದ ಸೇನಾ ಮುಖ್ಯಸ್ಥರು ಟೆಹರಾನ್‍ನಲ್ಲಿ ವಿದೇಶಾಂಗ ಸಚಿವ ಅರಾಘ್ಚಿ ಜೊತೆ ಮಾತುಕತೆ ನಡೆಸಿರುವುದು `ನಾವು ಒಂದು ತಿರುವು ಅಥವಾ ನಿರ್ಣಾಯಕ ಪರಿಸ್ಥಿತಿಯನ್ನು ತಲುಪಿದ್ದೇವೆ' ಎಂಬುದನ್ನು ಸೂಚಿಸುವುದಿಲ್ಲ ಎಂದು ಇರಾನ್ ವಿದೇಶಾಂಗ ಇಲಾಖೆಯ ವಕ್ತಾರರು ಪ್ರತಿಪಾದಿಸಿದ್ದಾರೆ.

*ಅಮೆರಿಕ ದಾಳಿ ಪುನರಾರಂಭಿಸಬಹುದು ಎಂಬ ವರದಿಗಳ ಬೆನ್ನಲ್ಲೇ ಇರಾನ್ ಶನಿವಾರ ತನ್ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿದೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries