ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಹೊಳೆಯಿಂದ ಅನಧಿಕೃತವಾಗಿ ಸಾಗಿಸುತ್ತಿದ್ದ ಮರಳು ಹಾಗೂ ಸಾಗಾಟಕ್ಕೆ ಬಳಸಿದ ಟಿಪ್ಪರ್ ಲಾರಿಯನ್ನು ಕುಂಬಳೆ ಠಾಣೆ ಎಸ್‍ಐ ಅನಂತಕೃಷ್ಣನ್ ಆರ್ ಮೆನೋನ್ ವಶಪಡಿಸಿದ್ದಾರೆ. ಟಿಪ್ಪರ್ ಲಾರಿ ಚಾಲಕ ಬಂದ್ಯೋಡು ಅಡ್ಕ ನಿವಾಸಿ ಮನೋಜ್ ಕುಮಾರ್ (26)ಎಂಬಾತನನ್ನು ಬಂಧಿಸಿದ್ದಾರೆ. ಬುಧವಾರ ತಡರಾತ್ರಿ ಮಧ್ಯರಾತ್ರಿ ಶಿರಿಯ ಹೊಳೆಯ ಪಾಚಾಣಿಯಿಂದ ಮರಳು ಸಂಗ್ರಹಿಸಿ ಸಾಗಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಎಸ್‍ಐ ಅನಂತಕೃಷ್ಣನ್ ಮಾರುವೇಷದಲ್ಲಿ ಕಾರಿನಲ್ಲಿ ತಲುಪಿ ಶಿರಿಯ ವಳಯಂನಲ್ಲಿ ಲಾರಿಗೆ ತಡೆಯೊಡ್ಡಿ ಕಾರ್ಯಾಚರಣೆ ನಡೆಸಿದ್ದಾರೆ. ಲಾರಿ ಮಾಲಕ ವಳಯಂ ನಿವಾಸಿ ಸಲೀಂ ಸೇರಿದಂತೆ ಇಬ್ಬರ ವಿರುದ್ಧ ಪೊಲೀಸರುಕೇಸು ದಾಖಲಿಸಿಕೊಂಡಿದ್ದಾರೆ.

