ಕಾಸರಗೋಡು: ಗಲ್ಫ್ ಉದ್ಯೋಗಿಯ ಮನೆಯಿಂದ 45 ಪವನ್‍ನ ಚಿನ್ನಾಭರಣ ಹಾಗೂ 50ಸಾವಿರ ರೂ. ನಗದು ಕಳವುಗೈದ ಪ್ರಕರಣದ ಆರೋಪಿಯನ್ನು ಕೊಯಂಬತ್ತೂರಿನಿಂದ ಪೆÇಲೀಸರು ಬಂಧಿಸಿದ್ದಾರೆ. ತಮಿಳುನಾಡು ಕೊಯಂಬತ್ತೂರು ಮೇಟ್ಟುಪಾಳಯಂ ನಿವಾಸಿ ರಾಜನ್ ಅಲಿಯಾಸ್ ಅಣ್ಣಾಚಿ ರಾಜನ್ (61) ಬಂಧಿತ. ಈತ 30ಕ್ಕೂ ಹೆಚ್ಚು ಕಳವು ಪ್ರಕರಣದಲ್ಲಿ ಆರೋಪಿಯಾಗಿರುವುದಾಗಿ ಪೊಲಿಸರು ತಿಳಿಸಿದ್ದಾರೆ. ಬೇಕಲ ಡಿವೈಎಸ್‍ಪಿ ಎಂ.ಪಿ. ಅಜಾದ್ ಅವರ ನೇತೃತ್ವದಲ್ಲಿ ಬೇಕಲ ಪೆÇಲೀಸ್ ಠಾಣಾಧಿಕಾರಿ ಶಿವಂ (ಐಪಿಎಸ್ ಟ್ರೈನಿ), ಇನ್‍ಸ್ಪೆಕ್ಟರ್ ಎಸ್. ಅಖಿಲ್ ಸೆಬಾಸ್ಟಿನ್ ಮತ್ತು ಎಸ್‍ಪಿಯವರ ನೇತೃತ್ವದ ವಿಶೇಷ ತಂಡದ ಪೆÇಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಬಾಗಿಲು ಹಾಗೂ ಕಪಾಟು ಮುರಿದು ನುಗ್ಗಿ ಕಳವುಗೈಯುವಲ್ಲಿ ರಾಜನ್ ನಿಸ್ಸೀಮನಾಗಿದ್ದನು. ಶೋರ್ನೂರ್‍ನಲ್ಲಿ ನಡೆದಿದ್ದ ಕಳವಿಗೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪೂಚಕ್ಕಾಡಿನ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಗಲ್ಫ್ ಉದ್ಯೋಗಿ ಪಳ್ಳಿಕ್ಕರೆ ಪೂಚಕ್ಕಾಡ್ ಆರಯಿಲ್‍ತುರ ನಿವಾಸಿ ಮಜೀದ್ ಎಂಬವರ ಮನೆಯಿಂದ ಮೇ 9ರಂದು ಈ ಕಳವು ನಡೆದಿದ್ದು, ಮಜೀದ್ ಅವರ ಪತ್ನಿ ಅಲೀಮ ಮತ್ತು ಮಗಳು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭ ಮನೆಯ ಬಾಗಿಲ ಬೀಗ ಒಡೆದು ಒಳನುಗ್ಗಿ ಕಪಾಟಿನೊಳಗೆ ಇರಿಸಲಾಗಿದ್ದ ನಗ-ನಗದನ್ನು ಕಳವುಗೈದಿರುವ ಬಗ್ಗೆ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

