ಕಾಸರಗೋಡು: ನಗರದ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ವಾರ್ಷಿಕ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದ ಅಂಗವಾಗಿ ಚಂಡಿಕಾ ಹೋಮ, ಶುದ್ದಿ ಕಲಶಾಭಿಷೇಕ, ಲಲಿತಾ ಸಹಸ್ರನಾಮ ಪಾರಾಯಣ, ಭಜನೆ, ಶ್ರೀ ಮಹಾತಾಯಿಯ ದರ್ಶನ ಸೇವೆ ಸೇರಿದಂತೆ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮ ಜರುಗಿತು.
ಕ್ಷೇತ್ರ ತಂತ್ರಿವರ್ಯ ಹಾರ್ನಾಡ್ ಕೆ. ಯು. ಪದ್ಮನಾಭ ತಂತ್ರಿ ನೇತೃಥ್ವ ವಹಿಸಿದ್ದರು. ಕಾಸರಗೋಡು ಕೋಟೆ ನಾಯಕರ ಕುಟುಂಬಸ್ಥರು, ಊರ ಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು. ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನ (ರಿ.)ಸಮಿತಿ ಅಧ್ಯಕ್ಷರಾದ ನಾಗೇಶ್ ನಾಯಕ, ಗೌರವಾಧ್ಯಕ್ಷ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ನೇತೃತ್ವ ವಹಿಸಿದ್ದರು.

