ಮಂಜೇಶ್ವರ : ಮಂಜೇಶ್ವರ ಸಮುದ್ರ ತೀರದಲ್ಲಿರುವ ಓಷನ್ ವಾಟರ್ ಪಾಕ್ರ್ನ ಮುಂಭಾಗದಲ್ಲಿರುವ ಬೃಹತ್ ಮರ ಯಾವುದೇ ಕ್ಷಣದಲ್ಲಿ ಧರೆಗುರುಳುವ ಸ್ಥಿತಿಯಲ್ಲಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಒಣಗಿದ ಈ ಮರ ಭಾರಿ ಅನಾಹುತಕ್ಕೆ ಕಾರಣವಾಗಬಹುದೆಂದು ಸ್ಥಳೀಯರು ಮತ್ತು ಪ್ರವಾಸಿಗರು ಆತಂಕ ವ್ಯಕ್ತಪಡಿಸಿದ್ದಾರೆ. ವಾಟರ್ ಪಾಕ್ರ್ನ ಎದುರಿನ ಸಣ್ಣ ಅಂಗಡಿ ಸಮೀಪವೇ ಈ ಮರವಿದ್ದು, ಪ್ರತಿದಿನ ಸಂಜೆಯ ವೇಳೆ ಕಡಲ ತಂಗಾಳಿಯನ್ನು ಸವಿಯಲು ಮತ್ತು ಸಮಯ ಕಳೆಯಲು ನೂರಾರು ಜನರು ಇಲ್ಲಿಗೆ ಬರುತ್ತಾರೆ. ಜನನಿಬಿಡ ಪ್ರದೇಶವಾಗಿರುವುದರಿಂದ ಈ ಮರ ಯಾವುದೇ ಸಮಯದಲ್ಲಿ ದೊಡ್ಡ ದುರಂತಕ್ಕೆ ಕಾರಣ ವಾಗಬಹುದು ಎನ್ನಲಾಗುತ್ತಿದೆ. ಈ ವಿಷಯವು ಗಮನಕ್ಕೆ ಬಂದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅನಾಹುತ ಸಂಭವಿಸುವ ಮುನ್ನವೇ ಪಂಚಾಯತ್ ಆಡಳಿತ ಎಚ್ಚೆತುಕ್ಕೊಂಡು, ಅಪಾಯಕಾರಿ ಮರವನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರ ಸುರಕ್ಷತೆ ಯನ್ನು ಖಾತರಿಪಡಿಸಬೇಕೆಂದು ಸ್ಥಳೀಯರು ಮತ್ತು ವ್ಯಾಪಾರಿಗಳು ಆಗ್ರಹಿಸಿದ್ದಾರೆ.

.jpg)
