ಬದಿಯಡ್ಕ: ಸಿದ್ದ ಉಡುಪು ಮಾರಾಟದಂಗಡಿಯಲ್ಲಿ ಕೆಲಸಕ್ಕಿದ್ದ ಯುವತಿಯನ್ನು ವಿವಿಧೆಡೆ ಕರೆದೊಯ್ದಿರುವುದನ್ನು ಪ್ರಶ್ನಿಸಿದ ಯುವಕ ಮತ್ತು ಆತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಠಾಣೆ ಪೊಲೀಸರು ಇಬ್ಬರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ತಾಲೂಕಿನ ಬೆಟ್ಟಂಪಾಡಿ ನಿವಾಸಿ, ಪೆರ್ಲದಲ್ಲಿಬಟ್ಟೆ ಅಂಗಡಿ ನಡೆಸುತ್ತಿರುವ ಕೆ.ಎಂ. ಮುಹಮ್ಮದ್ ಅಶ್ರಫ್ (45) ಹಾಗೂ ಪೆರ್ಲ ಸನಿಹದ ನಿವಾಸಿ ಉದನೇಶ್ವರ ಎಂಬವರಿಗೆ ಈ ಕೇಸು.
ಪೆರ್ಲದ ಸಿದ್ದ ಉಡುಪು ಅಂಗಡಿಯೊಂದರಲ್ಲಿ ದುಡಿಯುತ್ತಿರುವ ಮಹಿಳಾ ಸಿಬ್ಬಂದಿಯನ್ನು ಅಶ್ರಫ್ ಕರೆದೊಯ್ದಿರುವುದನ್ನು ಪ್ರಶ್ನಿಸಿದ ದ್ವೇಷದಲ್ಲಿ ಮೇ 19ರಂದು ಮಧ್ಯಾಹ್ನ ಅಂಗಡಿಯ ಮುಂದೆ ಆರೋಪಿಗಳು ನನ್ನನ್ನು ಮತ್ತು ನನ್ನ ಸ್ನೇಹಿತನನ್ನು ತಡೆದು ನಿಲ್ಲಿಸಿ ಕೈಯಿಂದ ಮತ್ತು ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆಗೆ ಯತ್ನಿಸಿರುವುದಾಗಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ಅವಿನಾಶ್ ತಿಳಿಸಿದ್ದಾರೆ.

