ಕಾಸರಗೋಡು: ಆಯುರ್ವೇದ ವಿದ್ಯಾರ್ಥಿನಿ ವೆಳ್ಳರಿಕುಂಡ್ ಪೆÇಲೀಸ್ ಠಾಣೆ ವ್ಯಾಪ್ತಿಯ ಪಾಲೋವ್ ವಲಿಯ ಪಾವತಟ್ಟ್ ನಿವಾಸಿ ಬಿನೀಶ್ ಎಂಬವರ ಪುತ್ರಿ ಟಿ.ವಿ.ಆರ್ಯ (18)ಅವರ ಮೃತದೇಹ ಮನೆಯ ಬೆಡ್‍ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶುಕ್ರವಾರ ರಾತ್ರಿ ಆರ್ಯ ಬೆಡ್‍ರೂಮಿನೊಳಗೆ ನೇಣಿನಲ್ಲಿ ನೇತಾಡುತ್ತಿರುವುದು ಕಂಡುಬಂದಿದ್ದು, ತಕ್ಷಣ ಮನೆಯವರು ಈಕೆಯನ್ನು ನೇಣಿನಿಂದ ಕೆಳಗಿಳಿಸಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ವಿದ್ಯಾರ್ಥಿನಿ ತಂದೆ ನೀಡಿದ ದೂರಿನನ್ವಯ ವೆಳ್ಳರಿಕುಂಡ್ ಠಾಣೆ ಪೆÇಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.


