ಕಾಸರಗೋಡು: ಬೇಕಲ ಪೋಲೀಸ್ ಠಾಣೆ ವ್ಯಾಪ್ತಿಯ ಪಳ್ಳಿಕೆರೆ ಪೂಚಕ್ಕಾಡ್‍ನಲ್ಲಿ ಸಂಚರಿಸುತ್ತಿದ್ದ ರೈಲಿಗೆ ಕಲ್ಲೆಸೆಯಲಾಗಿದ್ದು, ಇದರಿಂದ ಜನರಲ್ ಕೋಚ್‍ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗಾಯವುಂಟಾಗಿದೆ. ಕಲ್ಲೇಟಿನಿಂದ ನೀಲೇಶ್ವರ ಆಲಿಂಗಲ್ ನಿವಾಸಿ ಪಿ.ವಿ. ಕುಂಞಕೃಷ್ಣನ್‍ರ ಪತ್ನಿ ಅನಿತ (58)ಗಾಯಗೊಂಡಿದ್ದು, ಇವರನ್ನು ಕಾಞಂಗಾಡ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕೊಯಂಬತ್ತೂರಿಗೆ ಸಂಚರಿಸುತ್ತಿದ್ದ ಇಂಟರ್‍ಸಿಟಿ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್‍ಗೆ ಕಲ್ಲೆಸೆತ ಉಂಟಾಗಿದೆ. ಮಹಿಳೆ ಮಂಗಳೂರಿನಿಂದ ನೀಲೇಶ್ವರಕ್ಕೆ ಪ್ರಯಾಣಿಸುತ್ತಿದ್ದರು. ಇವರ ಬಲಕಣ್ಣಿನ ಭಾಗಕ್ಕೆ ಕಲ್ಲೆಸೆತದಿಂದ ಗಾಯವುಂಟಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ರೈಲ್ವೇ ಪೆÇಲೀಸರು ಕೇಸು ದಾಖಲಿಸಿದ್ದಾರೆ.
ಕಲ್ಲೆಸೆದಿರುವ ವ್ಯಕ್ತಿಯದ್ದೆಂದು ಸಂಶಯಿಸಲಾಗಿರುವ ದೃಶ್ಯಾವಳಿಯೊಮದು ಸನಿಹದ ಸಿಸಿ ಕ್ಯಾಮರದಲ್ಲಿ ದಾಖಲಾಗಿದ್ದು, ಇದನ್ನು ಕೇಂದ್ರೀಕರಿಸಿ ಪೊಲೀಸರು ಆರೋಪಿ ಪತ್ತೆಗೆ ಕ್ರಮ ಆರಂಭಿಸಿದ್ದಾರೆ.


