ಕುಂಬಳೆ: ತವರಿಂದ ಹೆಚ್ಚುವರಿ ಚಿನ್ನಾಭರಣ ತಂದುಕೊಡುವಂತೆ ಒತ್ತಾಯಿಸಿ ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಪತಿ ಸೇರಿದಂತೆ ಇಬ್ಬರ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬಂಬ್ರಾಣ ಕೊಡ್ಯಮ್ಮೆ ಚತ್ರಂಪಳ್ಳ ನಿವಾಸಿ ಆಯಿಷಾ ಬೀವಿ (25)ಎಂಬವರು ನೀಡಿದ ದೂರಿನನ್ವಯ, ಪತಿ ಬಂಬ್ರಾಣ ಕೊಡ್ಯಮ್ಮೆ ಪೂಕರೆ ನಿವಾಸಿ ಜಾಫರ್ ಸಾದಿಕ್, ಈತನ ತಾಯಿ ಆಯಿಷಾ ಎಂಬವರ ವಿರುದ್ಧ ಈ ಕೇಸು. 2022 ಅಕ್ಟೋಬರ್ 23ರಂದು ಜಾಫರ್ ಸಾದಿಕ್ ಹಾಗೂ ಆಯಿಷಾ ಬೀವಿ ವಿವಾಹ ನಡೆದಿತ್ತು. ಮದುವೆಯಾಗಿ ಮೂರು ತಿಂಗಳ ನಂತರ ತವರಿಂದ ಹೆಚ್ಚಿನ ಚಿನ್ನಾಭರಣ ತಂದುಕೊಡುವಂತೆ ಪತಿ ಜಾಫರ್‍ಸಾದಿಕ್ ಹಾಗೂ ಅತ್ತೆ ಆಯಿಷಾ ನಿರಂತರ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಾ ಬಂದಿರುವುದಾಗಿ ಆಯಿಷಾಬೀವಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

