ಕಾಸರಗೋಡು: ಜಿಲ್ಲೆ ರಚನೆಯಾಗಿ 42 ವರ್ಷ ಪೂರ್ತಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅವರು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಮಾವಿನ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಿಬ್ಬಂದಿ ಮಂಡಳಿ ಮತ್ತು ಅಕ್ಷರ ಗ್ರಂಥಾಲಯದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭ ನೌಕರರಿಗಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಜಿಲ್ಲೆಯ ಇತಿಹಾಸ ಮತ್ತು ಸಂಸ್ಕøತಿಗೆ ಸಂಬಂಧಿಸಿದ ಪ್ರಶ್ನೆಗಳನ್ನೊಳಗೊಮಡ ಕ್ಷಿಜ್ ಆಯೋಜಿಸಲಾಗಿತ್ತು. ಜಿಲ್ಲಾ ವಾರ್ತಾ ಕಚೇರಿ ಪಿ.ಆರ್.ಕೊಠಡಿಯಲ್ಲಿ ನಡೆದ ಸ್ಪರ್ಧೆಯಲ್ಲಿ, ಜಿಎಸ್‍ಟಿ ವಿಭಾಗದ ವಿ.ಎಂ. ಸತೀಶನ್ ಮತ್ತು ಎಂ. ಪವಿತ್ರನ್ ಪ್ರಥಮ ಸ್ಥಾನ ಪಡೆದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ರಸಪ್ರಶ್ನೆ ಸ್ಪರ್ಧೆಯನ್ನು ನಿರ್ವಹಿಸಿದರು. ಎ.ಡಿ.ಎಂ. ಕೆ.ವಿ. ಶ್ರುತಿ ವಿಜೇತರಿಗೆ ಬಹುಮಾನ ವಿತರಿಸಿದರು. ಜಿಲ್ಲಾ ಮಾಹಿತಿ ಕಚೇರಿ ಸಹಾಯಕ ಸಂಪಾದಕಿ ಎ.ಪಿ. ದಿಲ್ನಾ, ಅಕ್ಷರ ಗ್ರಂಥಾಲಯ ಮಂಡಳಿ ಕಾರ್ಯದರ್ಶಿ ಕೆ. ಮುಕುಂದನ್ ಮೊದಲಾದವು ಉಪಸ್ಥಿತರಿದ್ದರು.


