HEALTH TIPS

ಫುಜೈರಾ ದಕ್ಷಿಣ ಜಲಪ್ರದೇಶದ ಮೇಲೆ ನಿಯಂತ್ರಣ: ಇರಾನ್‌

 ಟೆಹರಾನ್‌: ಯುಎಇ ಪ್ರಮುಖ ಬಂದರುಗಳಲ್ಲೊಂದಾದ ಫುಜೈರಾದ ದಕ್ಷಿಣಕ್ಕಿರುವ ಸಮುದ್ರ ಪ್ರದೇಶದ ಮೇಲೆ ತಾನು ನಿಯಂತ್ರಣ ಸಾಧಿಸಿದ್ದಾಗಿ ಇರಾನ್‌ನ ಪರ್ಷಿಯನ್‌ ಕೊಲ್ಲಿ ಜಲಸಂಧಿ ಪ್ರಾಧಿಕಾರ ಹೇಳಿಕೊಂಡಿದೆ.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಯುಎಇ, ಪ್ರಾಧಿಕಾರದ ಹೇಳಿಕೆಯನ್ನು ಖಂಡಿಸಿದೆ. 


ಪ್ರಾಧಿಕಾರವನ್ನು ಇರಾನ್‌ ಇತ್ತೀಚೆಗೆಸ್ಥಾಪಿಸಿದೆ. ಜಲ ಪ್ರದೇಶದ ಕುರಿತು ಬುಧವಾರ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದೆ. ತಾನು ನಿಯಂತ್ರಣ ಹೊಂದಿರುವುದಾಗಿ ಹೇಳಿಕೊಂಡಿರುವ ಜಲಪ್ರದೇಶದ ನಕ್ಷೆಯನ್ನು ಕೂಡ ಪ್ರಾಧಿಕಾರವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಜಲಸಂಧಿಯ ವ್ಯಾಪ್ತಿ ಕುರಿತು ನಿರ್ಧರಿಸಿದ್ದಾಗಿ ಹೇಳಿಕೊಂಡಿದೆ.

'ಇರಾನ್‌ನ ಕುಹ್‌-ಎ-ಮುಬಾರಕ್‌ ನಿಂದ ಯುಎಇಯ ಫುಜೈರಾದ ದಕ್ಷಿಣದ ಜಲಪ್ರದೇಶದ ವರೆಗೆ, ನಂತರ ಇರಾನ್‌ನ ಕೆಶ್ಮ್‌ ದ್ವೀಪದಿಂದ ಯುಎಇಯ ಉಮ್‌-ಅಲ್‌ ಕುವೇನ್ ವರೆಗಿನ ಜಲಪ್ರದೇಶ ತನ್ನ ವ್ಯಾಪ್ತಿಗೆ ಒಳಪಡಲಿದೆ' ಎಂದು ಪ್ರಾಧಿಕಾರ ಹೇಳಿಕೊಂಡಿದೆ.

'ಹೊರ್ಮುಜ್‌ ಜಲಸಂಧಿ ಮೂಲಕ ಸಾಗಲು ಫುಜೈರಾ ಬಂದರಿನ ದಕ್ಷಿಣದ ಈ ಜಲಪ್ರದೇಶದ ಮೂಲಕವೇ ಸಂಚರಿಸಬೇಕು. ಇದಕ್ಕಾಗಿ ಪ್ರಾಧಿಕಾರದಿಂದ ದೃಢೀಕರಣ ಹಾಗೂ ಸಮನ್ವಯ ಅಗತ್ಯ' ಎಂದೂ ಹೇಳಿದೆ.

ಖಂಡನೆ: ಇರಾನ್‌ನ ಈ ಹೇಳಿಕೆಯನ್ನು ಯುಎಇ ಅಧ್ಯಕ್ಷರ ಸಲಹೆಗಾರ ಅನ್ವರ್‌ ಗರ್ಗಶ್ ಗುರುವಾರ ಖಂಡಿಸಿದ್ದಾರೆ.

'ಹೊರ್ಮುಜ್‌ ಜಲಸಂಧಿ ಮೇಲೆ ನಿಯಂತ್ರಣ ಸಾಧಿಸಲು ಇಲ್ಲವೇ ಸಮುದ್ರ ಗಡಿಗೆ ಸಂಬಂಧಿಸಿ ಯುಎಇಯ ಸಾರ್ವಭೌಮತೆಯನ್ನು ಉಲ್ಲಂಘಿಸಲು ಇರಾನ್‌ ಪ್ರಯತ್ನಿಸುತ್ತಿದೆ. ಇದು ಅಸಾಧ್ಯದ ಮಾತು' ಎಂದು ಅವರು 'ಎಕ್ಸ್‌'ನಲ್ಲಿ ತಿರುಗೇಟು ನೀಡಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries