HEALTH TIPS

ಎಬೋಲಾ | ಕಾಂಗೊದಲ್ಲಿ ತೀವ್ರ ಅಪಾಯಕಾರಿ ಪರಿಸ್ಥಿತಿ: ವಿಶ್ವ ಆರೋಗ್ಯ ಸಂಸ್ಥೆ ಕಳವಳ

 ಜಿನೀವಾ: ಕಾಂಗೊದಲ್ಲಿ ಎಬೋಲಾ ವ್ಯಾಪಕವಾಗಿ ಹರಡುತ್ತಿದ್ದು, ಪರಿಸ್ಥಿತಿ ತೀವ್ರ ಅಪಾಯಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ.


'ಕಾಂಗೊದಲ್ಲಿನ ಪರಿಸ್ಥಿತಿಯನ್ನು ತೀವ್ರ ಅಪಾಯಕಾರಿ ಎಂದು ಪರಿಷ್ಕರಿಸಲಾಗುತ್ತಿದೆ' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್‌ ಅಧಾನೊಮ್ ಅವರು ತಿಳಿಸಿದ್ದಾರೆ.ಈ ಹಿಂದೆ ಅಪಾಯಕಾರಿ ಎಂದಷ್ಟೆ ಘೋಷಿಸಲಾಗಿತ್ತು.

'ಪ್ರಾದೇಶಿಕವಾಗಿ ಸೋಂಕು ಹರಡುವ ಅಪಾಯ ಹೆಚ್ಚಿದ್ದು, ಜಾಗತಿಕವಾಗಿ ಕಡಿಮೆಯಿದೆ. ಕಾಂಗೊದಲ್ಲಿ 82 ಪ್ರಕರಣಗಳು ಮತ್ತು ಸೋಕಿನಿಂದಾಗಿ ಏಳು ಸಾವು ದೃಢಪಟ್ಟಿದೆ. ಆದರೆ ಅಲ್ಲಿ ಸೋಂಕು ವ್ಯಾಪಕವಾಗಿದೆ ಎಂಬುವುದು ನಮಗೆ ತಿಳಿದಿದೆ' ಎಂದು ಹೇಳಿದ್ದಾರೆ.

'750 ಶಂಕಿತ ಪ್ರಕರಣ ಮತ್ತು 177 ಶಂಕಿತ ಸಾವು ವರದಿಯಾಗಿದೆ. ನೆರೆಯ ಉಗಾಂಡದಲ್ಲಿ ಪರಿಸ್ಥಿತಿ ಸ್ಥಿರವಾಗಿದೆ. ಕಾಂಗೊದಿಂದ ತೆರಳಿರುವ ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries