ನವದೆಹಲಿ: ಕೇಂದ್ರೀಯ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ 12ನೇ ತರಗತಿಯ ವಾರ್ಷಿಕ ಪರೀಕ್ಷೆಯ ಉತ್ತರಪತ್ರಿಕೆಗಳ ಸ್ಕ್ಯಾನ್ ಮಾಡಿದ ಫೋಟೋಕಾಪಿಗಳನ್ನು ಪಡೆಯಲು ನಿಗದಿಪಡಿಸಲಾಗಿದ್ದ ಅಂತಿಮ ದಿನಾಂಕವನ್ನು ಮೇ 2026ರ ಮೇ 24ರವರೆಗೆವಿಸ್ತರಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್ ಅಭೂತಪೂರ್ವ ವೀಕ್ಷಕರ ದಟ್ಟಣೆಯನ್ನು ಎದುರಿಸುತ್ತಿದೆ.
ಅಲ್ಲದೆ ಅನಧಿಕೃತವಾಗಿ ಮಧ್ಯಪ್ರವೇಶಿಸುವ ಹಲವಾರು ಪ್ರಯತ್ನಗಳನ್ನು ಕೂಡಾ ಕಂಡಿರುವುದರಿಂದ ವ್ಯತ್ಯಯಗಳಿಗೆ ಕಾರಣವಾಗಿದೆ
ಈ ಹಿನ್ನೆಲೆಯಲ್ಲಿ ಯಾವುದೇ ವಿದ್ಯಾರ್ಥಿಯು ತೊಂದರೆಗೊಳಗಾಗದಂತೆ ನೋಡಿಕೊಳ್ಳುವ ಪ್ರಯತ್ನವಾಗಿ ಮಂಡಳಿಯು 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಉತ್ತರಪತ್ರಿಕೆಯ ಸ್ಕ್ಯಾನ್‌ಮಾಡಿದ ಪ್ರತಿಯನ್ನು ಪಡೆಯಲು ನಿಗದಿಪಡಿಸಲಾಗಿದ್ದ ದಿನಾಂಕವನ್ನು ಮೇ 24ರವರೆಗೆ ವಿಸ್ತರಿಸಿದೆ ಎಂದು ಸಿಬಿಎಸ್‌ಇ ಮಂಡಳಿಯು ಪತ್ರಿಕಾ ಪ್ರಕಟಣೆಯೊಂದರಲ್ಲಿ ತಿಳಿಸಿದೆ.
ಅಭ್ಯರ್ಥಿಗಳು ಅವಧಿ ವಿಸ್ತರಣೆಯ ಸದುಪಯೋಗಪಡೆದು, ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳು ಹಾಗೂ ಶರತ್ತುಗಳು ಯಥಾಪ್ರಕಾರ ಇರಲಿದೆ ಎಂದು ಮಂಡಳಿಯ ಹೇಳಿಕೆ ತಿಳಿಸಿದೆ.

