ವಾಶಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಅವರ ಹತ್ಯೆಗೆ ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ) ಜೊತೆ ಸಂಬಂಧ ಹೊಂದಿದ್ದ ಭಯೋತ್ಪಾದಕ ಸಂಚು ಹೂಡಿದ್ದ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಆರೋಪಿಯನ್ನು ಮುಹಮ್ಮದ್ ಬಾಖರ್ ಸಾದ್ ದಾವೂದ್ ಅಲ್-ಸಾದಿ ಎಂದು ಗುರುತಿಸಲಾಗಿದೆ. ಈತ 2020ರಲ್ಲಿ ನಡೆದ ಇರಾನ್‍ನ ಮಿಲಿಟರಿ ಕಮಾಂಡರ್ ಖಾಸೆಮ್ ಸೊಲೈಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಬಯಸಿದ್ದು ಇವಾಂಕಾರನ್ನು ಹತ್ಯೆ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದ. ಈತನ ಬಳಿ ಇವಾಂಕಾ ಅವರ ಫ್ಲೋರಿಡಾ ಮನೆಯ ನಕ್ಷೆಯೂ ಇತ್ತು. `ನಿಮ್ಮ ಅರಮನೆಗಳು ಅಥವಾ ಗುಪ್ತಚರ ಸೇವೆ ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಇವಾಂಕಾ ಮತ್ತು ಜರೆಡ್ ಕುಷ್ನರ್ ಅವರ 24 ದಶಲಕ್ಷ ಡಾಲರ್ ಮನೆಯ ನಕ್ಷೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ. ಈತನನ್ನು ಮೇ 15ರಂದು ತುರ್ಕಿಯೆಯಲ್ಲಿ ಬಂಧಿಸಿ ಅಮೆರಿಕಕ್ಕೆ ಗಡೀಪಾರು ಮಾಡಲಾಗಿದೆ ಎಂದು ವರದಿ ಹೇಳಿದೆ.

