ಶಿರಡಿ : ಒಂದು ಕಾಲದಲ್ಲಿ ಶಸ್ತ್ರಾಸ್ತ್ರಗಳ ಆಮದುದಾರ ದೇಶ ಎಂದು ಪರಿಗಣಿಸಲ್ಪಟ್ಟಿದ್ದ ಭಾರತವು, ಮುಂದಿನ 25-30 ವರ್ಷಗಳಲ್ಲಿ ಅತಿ ದೊಡ್ಡ ಶಸ್ತ್ರಾಸ್ತ್ರಗಳ ರಫ್ತುದಾರ ದೇಶವಾಗುವುದನ್ನು ತಡೆಯಲು ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶನಿವಾರ ಹೇಳಿದ್ದಾರೆ.
ಶಿರಡಿಯಲ್ಲಿ ಮದ್ದುಗುಂಡು ತಯಾರಿಕಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ವಲಯಯದ ಪಾಲನ್ನು ಶೇ 50ಕ್ಕೆ ಹೆಚ್ಚಿಸುವುದು ನಮ್ಮ ಗುರಿ ಎಂದು ಹೇಳಿದ್ದಾರೆ.
'ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ವಲಯವು ಕೇವಲ ನಟ್ ಮತ್ತು ಬೋಲ್ಟ್‌ಗಳ ಪೂರೈಕೆದಾರನಾಗಿ ಉಳಿದಿಲ್ಲ, ಬದಲಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳ ಉತ್ಪಾದಕ ಆಗಿದೆ. ಸರ್ಕಾರದ ದೂರದೃಷ್ಟಿ ಮತ್ತು ಖಾಸಗಿ ವಲಯದ ನಾವೀನ್ಯತೆಗಳು ಒಟ್ಟಿಗೆ ಸೇರಿದಾಗ ದೇಶವು ಹೊಸ ಎತ್ತರವನ್ನು ತಲುಪುತ್ತದೆ ಎಂದು ಸಿಂಗ್ ನುಡಿದಿದ್ದಾರೆ
ಭಾರತವನ್ನು ಮದ್ದುಗುಂಡು ಮತ್ತು ಅಟೊಮೇಷನ್ ಹಬ್ ಆಗಿ ಮಾಡಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಡ್ರೋನ್, ಸೆನ್ಸಾರ್‌ಗಳು ಯುದ್ಧದ ಸ್ವರೂಪ ಬದಲಿಸಿವೆ.

