HEALTH TIPS

'ಉಮೀದ್' ಪೋರ್ಟಲ್‌ನಿಂದ 31 ಸಾವಿರಕ್ಕೂ ಅಧಿಕ ವಕ್ಫ್ ಆಸ್ತಿ ರದ್ದು

 ನವದೆಹಲಿ: ಉತ್ತರಪ್ರದೇಶದಲ್ಲಿ ವಕ್ಫ್ ಆಸ್ತಿಗಳೆಂದು ನೋಂದಾಯಿಸಲ್ಪಟ್ಟಿದ್ದ 31 ಸಾವಿರಕ್ಕೂ ಅಧಿಕ ಆಸ್ತಿಗಳನ್ನು ಕೇಂದ್ರ ಸರಕಾರದ ಉಮೀದ್ ಪೋರ್ಟಲ್‌ನಿಂದ ತೆಗೆದುಹಾಕಲಾಗಿದೆ. ಬೃಹತ್ ಮಟ್ಟದಲ್ಲಿ ನಡೆದ ವಕ್ಫ್ ಆಸ್ತಿ ದೃಢೀಕರಣ ಪ್ರಕ್ರಿಯೆ ನಡೆದ ಸಂದರ್ಭ ಸಲ್ಲಿಸಲಾದ ದಾಖಲೆಗಳಲ್ಲಿ ಭಾರೀ ವ್ಯತ್ಯಾಸಗಳು ಹಾಗೂ ತಾಂತ್ರಿಕ ಅಸಂಜಸಂತೆಗಳು ಕಂಡುಬಂದ ಬಳಿಕ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.


ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಪತ್ರಗಳನ್ನು ಪರಿಶೀಲಿಸಿದ ಬಳಿಕ ಈ ನೋಂದಣಿಗಳನ್ನು ರದ್ದುಪಡಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮೀನು ಹಾಗೂ ಮಾಲಕತ್ವದ ಜಮೀನು ವಿವರಗಳು ಒಂದಕ್ಕೊಂದು ತಾಳೆಯಾಗದೆ ಇದ್ದುದರಿಂದ ಹಲವಾರು ಹಕ್ಕುಪ್ರತಿಪಾದನೆ (ಕ್ಲೇಮ್)ಗಳನ್ನು ಕೂಡಾ ತಿರಸ್ಕರಿಸಲಾಗಿದೆ ಎಂದವರು ಹೇಳಿದ್ದಾರೆ.

ಈವರೆಗೆ ಉಮೀದ್ ಪೋರ್ಟಲ್‌ನಿಂದ 31,328 ವಕ್ಫ್ ಆಸ್ತಿಗಳನ್ನು ಕೈಬಿಡಲಾಗಿದೆ. ಪ್ರಸಕ್ತ ಉತ್ತರಪ್ರದೇಶದಲ್ಲಿ ವಕ್ಫ್ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಅವುಗಳಲ್ಲಿ 1,18,302 ವಕ್ಫ್ ಆಸ್ತಿಗಳನ್ನು ದಾಖಲೀಕರಣಗೊಳಿಸಲಾಗಿದೆ.

ವಕ್ಫ್ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸುವ ಹಾಗೂ ವಕ್ಫ್ ಆಸ್ತಿಗಳಿಗೆ ಜಿಯೋ ಟ್ಯಾಗ್ ನೀಡುವ ಪ್ರಕ್ರಿಯೆಯ ಭಾಗವಾಗಿ ಕೇಂದ್ರ ಸರಕಾರವು ದೇಶಾದ್ಯಂದ ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಹಾಗೂ ಅಭಿವೃದ್ಧಿ ಪೋರ್ಟಲ್ (ಉಮೀದ್) ಅನ್ನು ಅನಾವರಣಗೊಳಿಸಿತ್ತು. 











ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries