HEALTH TIPS

ಅನಿಲ್ ಅಂಬಾನಿ ಕಂಪನಿಗಳ ಮೇಲೆ ಸಿಬಿಐ ದಾಳಿ

 ಮುಂಬೈ: ಅನಿಲ್‌ ಅಂಬಾನಿ ಅವರ ಮಾಲೀಕತ್ವದ ರಿಲಯನ್ಸ್‌ನ ಮೂರು ಕಂಪನಿಗಳಾದ ರಿಲಯನ್ಸ್‌ ಟೆಲಿಕಾಂ ಲಿಮಿಟೆಡ್‌, ರಿಲಯನ್ಸ್‌ ಕಮರ್ಷಿಯಲ್‌ ಫೈನಾನ್ಸ್‌ ಲಿಮಿಟೆಡ್‌ ಮತ್ತು ರಿಲಯನ್ಸ್‌ ಹೋಮ್‌ ಫೈನಾನ್ಸ್‌ ಲಿಮಿಟೆಡ್‌ ಮತ್ತು ಇವುಗಳ ನಿರ್ದೇಶಕರ ವಿರುದ್ಧ ದಾಖಲಾಗಿರುವ ಮೂರು ಪ್ರಕರಣಗಳಿಗೆ ಸಂಬಂಧಿಸಿ ಮುಂಬೈನ 17 ಕಡೆಗಳಲ್ಲಿ ಸಿಬಿಐ ಶನಿವಾರ ದಾಳಿ ನಡೆಸಿದೆ.


ರಿಯಲನ್ಸ್ ಗ್ರೂಪ್‌ನ ಕಂಪನಿಗಳ ವಿರುದ್ಧ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಹಾಗೂ ಎಲ್‌ಐಸಿ, ಕೋಟಿ ಕೋಟಿ ಮೊತ್ತದ ವಂಚನೆ ದೂರು ದಾಖಲಿಸಿದ್ದವು. ಈ ದೂರುಗಳ ಕುರಿತು ಕಳೆದ ಕೆಲವು ತಿಂಗಳಲ್ಲಿ ಸಿಬಿಐ ಹಲವು ಪ್ರಕರಣಗಳು ದಾಖಲಿಸಿಕೊಂಡಿದೆ.

ಮೂರು ಕಂಪನಿಗಳ ನಿರ್ದೇಶಕರ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಹಣದ ಅಕ್ರಮದ ವಹಿವಾಟು ನಡೆಸಲು ನಕಲಿ ಕಂಪನಿಗಳನ್ನು ಸೃಷ್ಟಿಸಲಾಗಿತ್ತು. 'ಎಲ್ಲ ಪ್ರಕರಣಗಳು ಸೇರಿ ಒಟ್ಟು ₹27,337 ಕೋಟಿ ನಷ್ಟವಾಗಿದೆ' ಎಂದು ಸಿಬಿಐ ಹೇಳಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries