HEALTH TIPS

ಹಾರ್ಮುಝ್‌ ಮಿಲಿಟರೀಕರಣಕ್ಕೆ ಚೀನಾ-ಅಮೆರಿಕ ವಿರೋಧ: ಬೀಜಿಂಗ್‍ನಲ್ಲಿ ಟ್ರಂಪ್ -ಕ್ಸಿ ಜಿಂಪಿಂಗ್ ಶೃಂಗಸಭೆ

ಬೀಜಿಂಗ್: ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿರಬಾರದು ಮತ್ತು ಹಾರ್ಮುಝ್‌ ಜಲಸಂಧಿ ಮುಕ್ತವಾಗಿರಬೇಕು ಎಂದು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡರು ಎಂದು ಶ್ವೇತಭವನ ಗುರುವಾರ ಹೇಳಿದೆ.

ಚೀನಾಕ್ಕೆ ಭೇಟಿ ನೀಡಿರುವ ಟ್ರಂಪ್ ಗುರುವಾರ ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರೊಂದಿಗೆ ಸಭೆ ನಡೆಸಿದರು.

ಈ ಸಂದರ್ಭ ಇಂಧನದ ಮುಕ್ತ ಹರಿವನ್ನು ಬೆಂಬಲಿಸಲು ಹಾರ್ಮುಝ್‌ ಜಲಸಂಧಿಯು ಮುಕ್ತವಾಗಿರಬೇಕು ಎಂದು ಎರಡೂ ಕಡೆಯವರು ಒಪ್ಪಿಕೊಂಡರು. ಅಧ್ಯಕ್ಷ ಕ್ಸಿ ಅವರು ಜಲಸಂಧಿಯ ಮಿಲಿಟರೀಕರಣಕ್ಕೆ ಮತ್ತು ಅದರ ಬಳಕೆಗೆ ಟೋಲ್ ವಿಧಿಸುವ ಯಾವುದೇ ಪ್ರಯತ್ನಕ್ಕೆ ಚೀನಾದ ವಿರೋಧವನ್ನು ಸ್ಪಷ್ಟಪಡಿಸಿದರು ಎಂದು ಹೇಳಿಕೆ ತಿಳಿಸಿದೆ.

ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೊ ` ಇರಾನ್‍ಗೆ ಯಾವುದೇ ಬೆಂಬಲವು ನಿಸ್ಸಂಶಯವಾಗಿ ನಮ್ಮ ಸಂಬಂಧಗಳಿಗೆ ಹಾನಿಕಾರಕವಾಗಿದೆ ಎಂದು ನಾವು ಚೀನಾದ ನಾಯಕರಿಗೆ ಸ್ಪಷ್ಟಪಡಿಸಿದ್ದೇವೆ. ತೈಲ ಸಾಗಣೆಯ ಮೇಲೆ ಇರಾನ್ ಬಿಕ್ಕಟ್ಟಿನ ಪರಿಣಾಮಗಳನ್ನು ಪರಿಹರಿಸುವಲ್ಲಿ ಚೀನಾ ಆಸಕ್ತಿ ಹೊಂದಿದೆ ಮತ್ತು ಹೆಚ್ಚು ಸಕ್ರಿಯ ಪಾತ್ರವನ್ನು ವಹಿಸಲು ನಾವು ಅವರನ್ನು ಮನವೊಲಿಸುವ ವಿಶ್ವಾಸವಿದೆ' ಎಂದು ಹೇಳಿದ್ದರು.

ಎರಡು ದಿನಗಳ ಶೃಂಗಸಭೆಗೆ ಚಾಲನೆ ನೀಡಿ ಮಾತನಾಡಿದ ಕ್ಸಿ ಜಿಂಪಿಂಗ್ ` ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಸ್ಥಿರ ಸಂಬಂಧವು ಸಂಪೂರ್ಣ ವಿಶ್ವಕ್ಕೆ ಪ್ರಯೋಜನಕಾರಿಯಾಗಿದೆ. ನಾವು ಸಹಕರಿಸಿದರೆ ಎರಡೂ ಕಡೆಯವರಿಗೆ ಲಾಭವಿದೆ, ಆದರೆ ಪರಸ್ಪರ ಮುಖಾಮುಖಿಯು ಎರಡೂ ಕಡೆಯವರಿಗೆ ಹಿನ್ನಡೆಯಾಗಲಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸೆಪ್ಟಂಬರ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡುವಂತೆ ಚೀನಾ ಅಧ್ಯಕ್ಷರನ್ನು ಆಮಂತ್ರಿಸಿದ ಟ್ರಂಪ್ `ಅಮೆರಿಕ ಮತ್ತು ಚೀನಾದ ನಡುವಿನ ಸಂಬಂಧ ದೀರ್ಘಕಾಲದಿಂದ ಆಳವಾಗಿ ಬೇರೂರಿದೆ ಮತ್ತು ಪರಸ್ಪರ ಸಹಕಾರ ಸಂಬಂಧವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ಹೇಳಿದರು.

ಬುಧವಾರ ದಕ್ಷಿಣ ಕೊರಿಯಾದ ಸಿಯೋಲ್‍ನಲ್ಲಿ ಅಮೆರಿಕ ಮತ್ತು ಚೀನಾದ ಆರ್ಥಿಕ ಮತ್ತು ವ್ಯಾಪಾರ ತಂಡಗಳ ನಡುವೆ ನಡೆದ ಮಾತುಕತೆಯು `ಸಮತೋಲಿತ ಮತ್ತು ಧನಾತ್ಮಕ ಫಲಿತಾಂಶ'ವನ್ನು ಸಾಧಿಸಿದೆ. ವ್ಯಾಪಾರ ಮತ್ತು ಕೃಷಿ ಕ್ಷೇತ್ರದಲ್ಲಿ ಸಹಕಾರ ಹೆಚ್ಚಿಸಲು ಉಭಯ ನಾಯಕರು ಸಮ್ಮತಿಸಿದರು ಮತ್ತು ಮಧ್ಯಪ್ರಾಚ್ಯ, ಉಕ್ರೇನ್ ಹಾಗೂ ಕೊರಿಯಾ ಪರ್ಯಾಯ ದ್ವೀಪದಲ್ಲಿನ ಪರಿಸ್ಥಿತಿಯ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡರು ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries