ಕಾಸರಗೋಡು: ವಿಶ್ವ ಬೈಸಿಕಲ್ ದಿನಾಚರಣೆಯ ಅಂಗವಾಗಿ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಡಿಟಿಪಿಸಿ) ಕಾಸರಗೋಡು ಮತ್ತು ಜಿಲ್ಲಾಡಳಿತ, ಕಾಸರಗೋಡು ಪೆಡಲರ್ಸ್ ಸೈಕ್ಲಿಂಗ್ ಕ್ಲಬ್, ಜಂಟಿಯಾಗಿ 'ಕಾಸರಗೋಡು ಫೆÇೀರ್ಟ್ ರೈಡ್-2026' ಎಂಬ ಪಾರಂಪರಿಕ ಬೈಸಿಕಲ್ ರೈಡನ್ನು ಆಯೋಜಿಸುತ್ತಿವೆ.
ಮೇ 31ರಂದು ಬೆಳಗ್ಗೆ 6ಕ್ಕೆ ಹೊಸದುರ್ಗ ಕೋಟೆಯಿಂದ ಆರಂಭವಾಗುವ ಸೈಕಲ್ ಸವಾರಿ, ಸುಮಾರು 70 ಕಿ.ಮೀ ಕ್ರಮಿಸಿ, ಕುಂಬಳೆಯ ಅರಿಕ್ಕಾಡಿ ಕೋಟೆಯಲ್ಲಿ ಕೊನೆಗೊಳ್ಳಲಿದೆ. ಕಾಸರಗೋಡಿನ ಐತಿಹಾಸಿಕ ಪರಂಪರೆಯ ಸಂಕೇತಗಳಾದ ಹೊಸದುರ್ಗ ಕೋಟೆ, ಬೇಕಲ ಕೋಟೆ, ಚಂದ್ರಗಿರಿ ಕೋಟೆ, ಪೆÇವ್ವಲ್ ಕೋಟೆ ಮತ್ತು ಅರಿಕ್ಕಾಡಿ ಕೋಟೆಯನ್ನು ಸಂಪರ್ಕಿಸುವ ಮೂಲಕ ಈ ಸವಾರಿಯನ್ನು ಆಯೋಜಿಸಲಾಗಿದೆ.
ರೈಡಲ್ಲಿ ಭಾಗವಹಿಸುವವರು ತಮ್ಮದೇ ಆದ ಸೈಕಲ್ ಮತ್ತು ಸುರಕ್ಷತಾ ಸಲಕರಣೆಗಳನ್ನು ಹೊಂದಿರಬೇಕು. ಇದರಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಸೀಮಿತ ಸೀಟುಗಳು ಲಭ್ಯವಿರುವುದರಿಂದ ಆಸಕ್ತ ಅಭ್ಯರ್ಥಿಗಳು ಡಿಟಿಪಿಸಿ ಕಾಸರಗೋಡು ವೆಬ್‍ಸೈಟ್ ತಿತಿತಿ.ಜಣಠಿಛಿಞಚಿsಚಿಡಿಚಿgoಜ.ಛಿom ಮೂಲಕ ಮುಂಚಿತವಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಡಿಟಿಪಿಸಿ ಕಾಸರಗೋಡು-ದೂರವಾಣಿ ಸಂಖ್ಯೆ(854716267, 9495672162)ಸಂಪರ್ಕಿಸಬಹುದಾಗಿದೆ.
ಪಾರಂಪರಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ಆರೋಗ್ಯಕರ ಜೀವನಶೈಲಿಗೆ ಪ್ರೇರಣೆ ಮತ್ತು ಸೈಕ್ಲಿಂಗನ್ನು ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿ ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಐಎಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವುದಾಗಿ ಪ್ರಕಟಣೆ ತಿಳಿಸಿದೆ.

.webp)
.webp)
