HEALTH TIPS

ಸೇವಾ ಮನೋಭಾವಕ್ಕೆ ಸಾಕ್ಷಿಯಾದ " ಶ್ರೀಗುರುಕಾರುಣ್ಯ" ದ ಗೃಹಪ್ರವೇಶ

ಕುಂಬಳೆ: ಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹದಿಂದ ಮುಳ್ಳೇರಿಯ ಮಂಡಲ ಗುಂಪೆ ವಲಯದ ಪುತ್ತಿಗೆ ಕೃಷ್ಣ ಹೆಬ್ಬಾರರ ಶಿಥಿಲಗೊಂಡಿದ್ದ ಮನೆಯನ್ನು ನವೀಕರಿಸಲಾಗಿದ್ದು, ಮೇ 2 ರಂದು ಈ ನೂತನ ಗೃಹ " ಶ್ರೀಗುರುಕಾರುಣ್ಯ " ನಿವಾಸದ ಪ್ರವೇಶೋತ್ಸವ ನೆರವೇರಿತು.


ಹವ್ಯಕ ಮಹಾಮಂಡಲ ಹಾಗೂ ಮುಳ್ಳೇರಿಯ ಮಂಡಲ, ಗುಂಪೆವಲಯದ ಪದಾಧಿಕಾರಿಗಳ, ಸಹೃದಯೀ ದಾನಿಗಳ ಹಾಗೂ ಸಮಾಜದ ವಿವಿಧ ಸಂಘಟನೆಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮವು ಸೇವಾ ಮನೋಭಾವಕ್ಕೆ ಮಾದರಿಯಾಗಿ ಮೂಡಿಬಂತು.

ಗೃಹಪ್ರವೇಶದ ಪ್ರಯುಕ್ತ ಮುಂಜಾನೆ ಗಣಪತಿ ಹೋಮ, ಶಿವಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದ್ದು, ನಂತರ ನಡೆದ ಸಭೆಯ ಅಧ್ಯಕ್ಷತೆಯನ್ನು ಗುಂಪೆ ವಲಯಾಧ್ಯಕ್ಷ ಕುಮಾರಸುಬ್ರಹ್ಮಣ್ಯ ಕೊಂದಲಕಾಡು ವಹಿಸಿದರು.


ಇ.ಎಸ್. ಮಹಾಬಲೇಶ್ವರ ಭಟ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುಂಪೆವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಸ್ವಾಗತಿಸಿ, ಪುತ್ತಿಗೆ ನಾರಾಯಣ ಹೆಬ್ಬಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಗೋಮಾತೆ ಮತ್ತು ಗುರುವಿನ ನಡುವಿನ ಅನುಬಂಧವು ಈ ನಿವಾಸದ ನವೀಕರಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ನಾವು ಗೋಮಾತೆಯ ಸೇವೆ ಮಾಡಿದರೆ ಸಾಕು, ಆ ಗೋಮಾತೆಯೇ ನಮ್ಮನ್ನು ಕಾಪಾಡುತ್ತಾಳೆ. ಕೃಷ್ಣ ಹೆಬ್ಬಾರ್ ಅವರ ಕುಟುಂಬದ ಗೋಪ್ರೇಮವು ಇಂದು ಗುರು ಕಾರುಣ್ಯದ ರೂಪದಲ್ಲಿ ತಲೆಯೆತ್ತಿ ನಿಂತಿದೆ. ಇಲ್ಲಿ ಗುರುವಿಗೆ ಮತ್ತು ಗೋವಿಗೆ ಇರುವ ಸ್ಪಂದನೆ ಕಾಣುತ್ತಿದೆ. ಕಷ್ಟದಲ್ಲಿರುವವರ ಬಾಳಲ್ಲಿ ಬೆಳಕಾಗುವುದು ಅತ್ಯಂತ ಪವಿತ್ರವಾದ ಕಾರ್ಯ. ಎಡಕ್ಕಾನ ಮಹಾಬಲೇಶ್ವರ ಭಟ್ ರವರಂತಹ ದಾನಿಗಳು ಈ ಸತ್ಕಾರ್ಯಕ್ಕೆ ಮುಂಚೂಣಿಯಲ್ಲಿ ನಿಂತು ಸಹಕರಿಸಿರುವುದು ನಮ್ಮ ಸಮಾಜದ ಸತ್ಕಾರ್ಯಕ್ಕೆ ಪ್ರೇರಣೆಯಾಗಿದೆ" ಎಂದು ಶ್ಲಾಘಿಸಿದರು.

"ಮಳೆನೀರು ಒಳಗೆ ಬರುವಷ್ಟು ಶಿಥಿಲಗೊಂಡ ಮನೆಯಲ್ಲಿ ವಾಸಿಸುತ್ತಿದ್ದ ಹೆಬ್ಬಾರರ ಕುಟುಂಬದ ಕಷ್ಟಕ್ಕೆ ಸ್ಪಂದಿಸುವುದು ನಮ್ಮೆಲ್ಲರ ಆದ್ಯತೆಯಾಗಿತ್ತು. ಒಬ್ಬರು ಕಷ್ಟದಲ್ಲಿದ್ದಾಗ ಸಹಾಯ ಮಾಡುವ ಮನಸ್ಸು ಮುಖ್ಯ. ಇದು ನನ್ನ ಮೂರನೇ ಮನೆ ನಿರ್ಮಾಣದ ಅನುಭವ, ನಾಲ್ಕನೆಯ ಮನೆಯೊಂದು ನಿರ್ಮಾಣದ ಹಂತದಲ್ಲಿದೆ. ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಮನಸ್ಸಿಗೆ ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲೂ ಇಂತಹ ಸತ್ಕಾರ್ಯಗಳು ನಮ್ಮ ಸಂಘಟನೆಯಿಂದ ನಡೆಯುವಂತಾಗಬೇಕು " ಎಂದು ಇ.ಎಸ್. ಮಹಾಬಲೇಶ್ವರ ಭಟ್ ನುಡಿದರು

ಹವ್ಯಕ ಮಹಾಮಂಡಲದ ಸಹಾಯ ಪ್ರಧಾನರಾದ ವಿದ್ಯಾಲಕ್ಷ್ಮಿ ಕೈಲಂಕಜೆ ಅವರು, "ಸಹಾಯ ಮಾಡುವ ಗುಣವು ನಿಷ್ಕಲ್ಮಶ ಮನಸ್ಸಿನಿಂದ ಬರಬೇಕು. ನಮ್ಮ ಸುತ್ತಮುತ್ತಲಿನ ಒಬ್ಬರು ಕಷ್ಟದಲ್ಲಿದ್ದಾಗ ಅವರಿಗೆ ನೆರವಾಗುವ ಮನಸ್ಸು ಎಲ್ಲಕ್ಕಿಂತ ಮುಖ್ಯ. ಈ ಮನೆಯು ಕೇವಲ ಕಟ್ಟಡವಲ್ಲ, ಇದು ಹತ್ತಾರು ಜನರ ಸೇವಾ ಮನೋಭಾವದ ಸಾಕಾರ ರೂಪವಾಗಿದೆ. ಸಂಕಷ್ಟದ ಸಮಯದಲ್ಲಿ ಪರಸ್ಪರ ಕೈಹಿಡಿಯುವ ಇಂತಹ ಕಾರ್ಯಗಳು ಸಮಾಜದಲ್ಲಿ ಇನ್ನಷ್ಟು ನಡೆಯಬೇಕು" ಎಂದು ಅಭಿಪ್ರಾಯಪಟ್ಟರು.


ಶ್ರಾವಣಕೆರೆ ಘಟಕದ ಗುರಿಕಾರರಾದ ಎಸ್ ಎಲ್ ನಾರಾಯಣ ಹೆಬ್ಬಾರ್, ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಸುಬ್ರಮಣ್ಯ ಭಟ್ ಕೆರೆಮೂಲೆ, ಇಂಜಿನಿಯರ್ ಕೆ ರಾಮಚಂದ್ರ ಶಾಸ್ತ್ರಿಗಳು, ಗುಂಪೆ ವಲಯ ಮಾತೃಪ್ರಧಾನೆ ಕಾವೇರಿ ಅಮ್ಮ ಹಾಗೂ ವಿವಿಧ ಗಣ್ಯರು ಈ ಸಂದರ್ಭದಲ್ಲಿ ಕೃಷ್ಣ ಹೆಬ್ಬಾರ್ ಅವರ ಕುಟುಂಬಕ್ಕೆ ಶುಭಹಾರೈಸಿದರು

ಪುತ್ತಿಗೆ ಕೃಷ್ಣ ಹೆಬ್ಬಾರ್ ಅವರು ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾ, "ಸಮುದಾಯದ ಬಂಧುಗಳು ತಮ್ಮ ಮನೆಯಂತೆ ಭಾವಿಸಿ ನಮಗೊಂದು ಆಸರೆ ಕಲ್ಪಿಸಿಕೊಟ್ಟಿದ್ದಾರೆ. ಇದು ನಮಗೆ ದೊರಕಿದ ಗುರುಕಾರುಣ್ಯ. ಚಂದದ ಮನೆ" ಎಂದು ಶ್ರೀಗುರುಕಾರುಣ್ಯ ನಿವಾಸ ನವೀಕರಣಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಮನೆಯ ನವೀಕರಣಕ್ಕೆ ನೇತೃತ್ವ ವಹಿಸಿದ ಸಹೃದಯೀ ದಾನಿ ಇ.ಎಸ್. ಮಹಾಬಲೇಶ್ವರ ಭಟ್ ಅವರನ್ನು ಹವ್ಯಕ ಮಹಾಮಂಡಲ ಅಧ್ಯಕ್ಷರಾದ ಹರಿಪ್ರಸಾದ್ ಪೆರಿಯಪ್ಪು ಅವರು ಸನ್ಮಾನಿಸಿ ಗೌರವಿಸಿದರು.

ಪುತ್ತಿಗೆ ಕೃಷ್ಣ ಹೆಬ್ಬಾರರ ಮನೆಯ ನವೀಕರಣ ಕಾರ್ಯಕ್ಕೆ ಹಾಗೂ ಅವರಿಗೆ ಸರಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ಒದಗಿಸಲು ಶ್ರಮಿಸಿದ ನಾರಾಯಣ ಹೆಬ್ಬಾರ್ ಪುತ್ತಿಗೆ ಹಾಗೂ ಮನೆಯ ವಾಸ್ತುಶಿಲ್ಪ ಹಾಗೂ ನಿರ್ಮಾಣ ಕಾರ್ಯಕ್ಕೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾರ್ಗದರ್ಶನ ನೀಡಿದ ಇಂಜಿನಿಯರ್ ಕೆ. ರಾಮಚಂದ್ರ ಶಾಸ್ತ್ರಿಗಳನ್ನು ಸಭೆಯಲ್ಲಿ ಗೌರವಿಸಲಾಯಿತು.

ನಿವಾಸದ ನವೀಕರಣ ಕಾರ್ಯದಲ್ಲಿ ಹಗಲಿರುಳು ಶ್ರಮಿಸಿದ ಗುಂಪೆ ವಲಯದ ಅಧ್ಯಕ್ಷ ಕುಮಾರಸುಬ್ರಹ್ಮಣ್ಯ ಕೊಂದಲಕಾಡು ಹಾಗೂ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಅವರ ಕಾರ್ಯವನ್ನು ಸಭೆಯಲ್ಲಿ ಮುಕ್ತಕಂಠದಿಂದ ಶ್ಲಾಘಿಸಲಾಯಿತು. ಪುತ್ತಿಗೆ ಪಂಚಾಯತ್ ಸದಸ್ಯರಾದ ರೂಪಾ ರೈ, ಮಾಜಿ ಸದಸ್ಯ ಫಾಲಾಕ್ಷ ರೈ ಅವರ ನಿರಂತರ ಸಹಕಾರವನ್ನು ಸ್ಮರಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ ವೈ ವಿ ಕೃಷ್ಣಮೂರ್ತಿ, ಬದಿಯಡ್ಕ ಶಾಸನತಂತ್ರ ಪದಾಧಿಕಾರಿಯಾದ ಪ್ರಸನ್ನಾ ವಿ. ಚೆಕ್ಕೆಮನೆ, ಮಂಡಲ ಕೋಶಾಧ್ಯಕ್ಷ ಪರಮೇಶ್ವರ ಪೆರುಮುಂಡ,ಶಿಷ್ಯ ಮಾಧ್ಯಮ ಪ್ರಧಾನ ಮಹೇಶ ಕೃಷ್ಣ ತೇಜಸ್ವಿ,ಗುಂಪೆ ವಲಯದ ಸಹಾಯ ಪ್ರಧಾನರಾದ ಮರುವಳ ಕೃಷ್ಣ ಭಟ್ ಹಾಗೂ ಲೇಖ ವಿಭಾಗದ ಗೋವಿಂದ ಭಟ್, ಚಕ್ಕಣಿಗೆ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಾಲಸುಬ್ರಹಣ್ಯ ಭಟ್ ಮತ್ತು ವಲಯದ ವಿವಿಧ ಘಟಕಗಳ ಗುರಿಕಾರರು, ಪದಾಧಿಕಾರಿಗಳು ಹಾಗೂ ಗುರುಬಂಧುಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಹೋದರರಾದ ಕೃಷ್ಣ ಹೆಬ್ಬಾರ್, ನಾರಾಯಣ ಹೆಬ್ಬಾರ್ ಹಾಗೂ ಸಹೋದರಿ ಪಾರ್ವತಿ ಅವರಿಗೆ ಶ್ರೀಗುರುಗಳ ಮಂತ್ರಾಕ್ಷತೆ ಮತ್ತು ಪ್ರಸಾದವನ್ನು ನೀಡಿ, ನೂತನ ನಿವಾಸದ ಕೀಲಿ ಕೈಯನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಎಲ್ಲರ ಸಾಮೂಹಿಕ ಶ್ರಮದಿಂದ ಶಿಥಿಲಗೊಂಡಿದ್ದ ಮನೆಯೊಂದು ಇಂದು ಸುಂದರ ನಿವಾಸವಾಗಿ ಮಾರ್ಪಟ್ಟಿರುವುದು ಎಲ್ಲರಲ್ಲೂ ಸಮಾಧಾನ ತಂದಿತು. ಗುಂಪೆ ವಲಯದ ಲೇಖ ವಿಭಾಗದ ಗೋವಿಂದ ಭಟ್ ಹಳ್ಳಕೋಡ್ಲು ಅವರ ವಂದನಾರ್ಪಣೆಯೊಂದಿಗೆ ಸಭಾ ಕಾರ್ಯಕ್ರಮವು ಮುಕ್ತಾಯವಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries