HEALTH TIPS

ಕನ್ನಡ ಅಧ್ಯಾಪಕ ಸಂಘದ ಕೇಂದ್ರ ಸಮಿತಿಯ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ) ಕಾಸರಗೋಡು ಇದರ ಕೇಂದ್ರ ಸಮಿತಿಯ ಮಹಾಸಭೆ ಬೀರಂತಬೈಲಿನ ಕನ್ನಡ ಅಧ್ಯಾಪಕ ಭವನದಲ್ಲಿ ಜರುಗಿತು. 


ಕೇಂದ್ರ ಸಮಿತಿಯ ಅಧ್ಯಕ್ಷ  ಸುಕೇಶ್ ಎ ಅಧ್ಯಕ್ಷತೆ  ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ  ಪ್ರದೀಪ್ ಕುಮಾರ್ ಶೆಟ್ಟಿ  ವಾರ್ಷಿಕ ವರದಿ,  ಲೆಕ್ಕ ಪತ್ರವನ್ನು ಕೋಶಾಧಿಕಾರಿ ಶರತ್ ಕುಮಾರ್  ಮಂಡಿಸಿದರು. 

ಈ ಸಂದರ್ಭ ನಡೆದ ಸಂಘಟನಾತ್ಮಕ ಚರ್ಚೆಯಲ್ಲಿ  ಕುಂಬಳೆ ಉಪಜಿಲ್ಲಾ ಅಧ್ಯಕ್ಷರಾದ ಶ್ರೀಹರ್ಷ ಎಂ. ಪಿ, ಬೇಕಲ-ಹೊಸದುರ್ಗ ಉಪಜಿಲ್ಲಾ ಸಮಿತಿಯ ಅಧ್ಯಕ್ಷರಾದ  ವಿಠಲ ಅಡ್ವಳ, ಕಾಸರಗೋಡು ಉಪಜಿಲ್ಲಾ ಅಧ್ಯಕ್ಷರಾದ  ಕುಶ ಪಿ.ಎಲ್, ಕಾರ್ಯದರ್ಶಿ ಪೂರ್ಣಿಮಾ ಯಂ, ಕೋಶಾಧಿಕಾರಿ ಸುರೇಖಾ ಕೆ ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಎಂ,ಕೋಶಾಧಿಕಾರಿ ಕಿಶೋರ್ ಕುಮಾರ್ ಪಾಲ್ಗೊಂಡಿದ್ದರು. 

 ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ , ಶ್ರೀಮತಿ ಶ್ರೀಲತಾ ಕೆ, ಕಾರ್ಯದರ್ಶಿಗಳಾದ ಜಯಪ್ರಶಾಂತ್ ಪಾಲೆಂಗ್ರಿ, ಪ್ರದೀಪ್ ಕೆ.ವಿ ಉಪಸ್ಥಿತರಿದ್ದರು.ಈ ಸಂದರ್ಭ ನೂತನ ಸಮಿತಿಗೆ ಪದಾಧಿಕಾರಿಗಳ  ಆಯ್ಕೆ ನಡೆಯಿತು.  ಮಂಜೇಶ್ವರ ಜಿ.ಡಬ್ಲ್ಯೂ.ಎಲ್.ಪಿ.ಶಾಲೆ  ಮುಖ್ಯ ಶಿಕ್ಷಕ  ಸುಕೇಶ್ ಎ ಅಧ್ಯಕ್ಷ , ಕಿಳಿಂಗಾರು ಎ.ಎಲ್.ಪಿ.ಶಾಲೆ ಶಿಕ್ಷಕ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ,   ಬೋವಿಕ್ಕಾನದ ಎ.ಯು.ಪಿ ಶಾಲೆ ಶಿಕ್ಷಕ ಪ್ರದೀಪ್ ಕೆ.ವಿ ಕೋಶಾಧಿಕಾರಿ,  ಕುಂಟಿಕಾನ ಎ.ಎಸ್.ಬಿ.ಎಸ್. ಶಿಕ್ಷಕ ಶ್ರೀ ಶರತ್ ಕುಮಾರ್  ಯಂ ಜತೆ ಕೋಶಾಧಿಕಾರಿಯಾಗಿ ಆಯ್ಕೆಯಾದರು.

 ಕೂಡ್ಲು ಶಾಲೆಯ ಶಿಕ್ಷಕಿ  ಶ್ರೀಲತಾ ಕೆ , ವಿದ್ಯಾರಣ್ಯ ಎ.ಎಲ್.ಪಿ. ಶಾಲೆ ಬೆರಿಪದವಿನ ಮುಖ್ಯ ಶಿಕ್ಷಕ  ಉಮೇಶ್ ಕೆ, ಇಚ್ಲಂಗೋಡು ಶಾಲಾ ಮುಖ್ಯ ಶಿಕ್ಷಕ  ಜಯರಾಮು ಸಿ. ಎಚ್, ಚಂದ್ರಗಿರಿ ಶಾಲಾ ಮುಖ್ಯ ಶಿಕ್ಷಕಿ ಯಶೋದಾ ಉಪಾಧ್ಯಕ್ಷರು, ಕುಳೂರು ಜಿ.ಎಲ್.ಪಿ.ಶಾಲೆ ಶಿಕ್ಷಕ  ಜಯಪ್ರಶಾಂತ್ ಪಾಲೆಂಗ್ರಿ, ಕಾರಡ್ಕ ಶಾಲೆಯ ಶಿಕ್ಷಕ ಡಾ. ಶ್ರೀಶ ಕುಮಾರ್ ಪಂಚಿತ್ತಡ್ಕ, ಆನೆಕಲ್ಲು ಶಾಲೆಯ ಶಿಕ್ಷಕ ಜೀವನ್ ಕುಮಾರ್, ಬೆಳ್ಳೂರು ಶಾಲೆಯ ಶಿಕ್ಷಕ ನವೀನ್ ಕುಮಾರ್ ಪಿ ಕಾರ್ಯದರ್ಶಿಗಳು,   ಮಂಜೇಶ್ವರ ಜಿ.ಡಬ್ಲ್ಯೂ.ಎಲ್.ಪಿ.ಶಾಲೆ ಶಿಕ್ಷಕ  ಜಬ್ಬಾರ್ ಬಿ ಸಂಘಟನಾ ಕಾರ್ಯದರ್ಶಿ, ಬಂದಡ್ಕ  ಜಿ.ಎಚ್.ಎಸ್.ಎಸ್. ಶಿಕ್ಷಕ ಶ್ರೀ ಬಾಬು ಕೆ ಅಧಿಕೃತ ವಕ್ತಾರ ಹಾಗೂ   ಲೆಕ್ಕ ಪರಿಶೋಧಕರಾಗಿ ಜಿ.ಎಲ್.ಪಿ.ಶಾಲೆ ಪನೆಯಾಲದ ಶಿಕ್ಷಕ  ಪುರುಷೋತ್ತಮ ಕುಲಾಲ್ ಹಾಗೂ ಜಿ.ಎಚ್.ಎಸ್.ಎಸ್. ಕಾಸರಗೋಡಿನ ಶಿಕ್ಷಕ  ಅಬ್ದುಲ್ ರಹಿಮಾನ್ ಅವರನ್ನು ಆಯ್ಕೆ ಮಾಡಲಾಯಿತು.

ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ,ಶೀ ಪ್ರದೀಪ್ ಕೆ.ವಿ ವಂದಿಸಿದರು. ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries