ಕೊಲ್ಲಂ: ಕೇರಳದಲ್ಲಿ ಕಮಲ ಮತ್ತೆ ಅರಳಿದೆ. ಚಾತನ್ನೂರಿನಲ್ಲಿ ನಡೆದ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಬಿಜೆಪಿಯ ಬಿ.ಬಿ. ಗೋಪಕುಮಾರ್ 4012 ಮತಗಳಿಂದ ಗೆದ್ದಿದ್ದಾರೆ. ಸಿಪಿಐನ ಆರ್. ರಾಜೇಂದ್ರನ್ ಅವರನ್ನು ಗೋಪಕುಮಾರ್ ಸೋಲಿಸಿದ್ದಾರೆ.
ಮತ ಎಣಿಕೆ ಆರಂಭದಿಂದಲೂ ಚಾತನ್ನೂರು ಸಸ್ಪೆನ್ಸ್ ಕಾಯ್ದುಕೊಂಡಿರುವ ಕ್ಷೇತ್ರ. ಪರ್ಯಾಯ ಗೆಲುವು ಮತ್ತು ಸೋಲುಗಳನ್ನು ಕಂಡ ಹೋರಾಟದಲ್ಲಿ ಗೋಪಕುಮಾರ್ ಅವರ ಗೆಲುವು ಪೋಟೋ ಫಿನಿಶ್ ಆಗಿತ್ತು. ಇದಕ್ಕೂ ಮೊದಲು, ನೇಮಂ ಕ್ಷೇತ್ರದಲ್ಲಿ ಎನ್‍ಡಿಎ ಗೆದ್ದಿತ್ತು. 2106 ರಲ್ಲಿ, ಬಿಜೆಪಿಯ ಒ.ರಾಜಗೋಪಾಲ್ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು.

