ಪೆರ್ಲ: ಅಖಂಡ ಏಕಹ ಭಜನೆ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ಮೇ 13ರಂದು ಜರುಗಲಿದೆ. ವೇದಮೂರ್ತಿ ಶುಳುವಾಲಮೂಲೆ ಶಿವಸುಬ್ರಮಣ್ಯ ಭಟ್ಟ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿರುವುದು.ಅಂದು ಬೆಳಗ್ಗೆ 6.06ಕ್ಕೆ ದೀಪಪ್ರತಿಷ್ಠೆ, ಸಾಮೂಹಿಕ ಪ್ರಾರ್ಥನೆ, ಏಕಾಹ ಭಜನೆ ಪ್ರಾರಂಭಗೊಳ್ಳುವುದು.
ವಿವಿಧ ಭಜನಾ ತಂಡದಿಂದ ಭಜನೆ, ಸಂಜೆ 5.30ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭಗೊಂಡು, ರಾತ್ರಿ 9ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ ನಡೆಯುವುದು.
ಶ್ರೀ ಸತ್ಯನಾರಾಯಣ ಭಜನಾ ಸಂಘ, ಪೆರ್ಲ, ಶ್ರೀ ದುರ್ಗಾ ಮಹಿಳಾ ಬಂಟರ ಭಜನಾ ಸಂಘ, ಪೆರ್ಲ, ಶ್ರೀ ಗೋಮಾತಾ ಭಜನಾ ಸಂಘ, ಪಳ್ಳಿಕಾನ-ಬಜಕೂಡ್ಲು, ಶ್ರೀ ಅಯ್ಯಪ್ಪಸ್ವಾಮಿ ಭಜನಾ ಸಂಘ, ಪೆರ್ಲ, ಜೈ ಶ್ರೀರಾಮ ಭಜನಾ ಸಂಘ, ಉಕ್ಕಿನಡ್ಕ, ಶ್ರೀ ಶಾರದಾಂಬ ಭಜನಾ ಸಂಘ, ಬೇಂಗಪದವು, ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಭಜನಾ ಸಂಘ ಕಾಟುಕುಕ್ಕೆ, ಶ್ರೀ ದುರ್ಗಾಪರಮೇಶ್ವರೀ ಭಜನಾ ಸಂಘ, ಮಣಿಯಂಪಾರೆ, ಶ್ರೀ ಗಣೇಶ ಭಜನಾ ಮಂದಿರ, ಬೆದ್ರಂಪಳ್ಳ, ಶ್ರೀ ಉದಯನ್ ವಿಶ್ವಕರ್ಮ ಪಂಜಿಕಲ್ಲು ಮತ್ತು ಬಳಗ, ಕಾರ್ಲೆ ಕಾಳಿಕಾಂಬಾ ಭಜನಾ ಸಂಘ, ಆರಿಕ್ಕಾಡಿ-ಕುಂಬಳೆ, ಶ್ರೀ ಅಯ್ಯಪ್ಪಸ್ವಾಮೀ ಭಜನಾ ಮಂಡಳಿ, ಬಣ್ಣತ್ತಡ್ಕ, ಶ್ರೀದೇವಿ ಭಜನಾ ಸಂಘ, ಬಾಳೆಮೂಲೆ-ಸುಂದರಗಿರಿ, ಶ್ರೀ ಪಾಂಚಜನ್ಯ ಭಜನಾ ಸಂಘ, ಪೆರ್ಲ, ಶ್ರೀ ವಾಗ್ದೇವೀ ಭಜನಾ ಸಂಘ ನಲ್ಕ, ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ, ಬಜಕೂಡ್ಲು ವತಿಯಿಮದ ಭಜನಾ ಸೇವೆ ನಡೆಯುವುದು.

