HEALTH TIPS

ಅಡುಗೆ ಅನಿಲ ಬೆಲೆ ಏರಿಕೆ: ಐಎನ್.ಟಿಯುಸಿ ವತಿಯಿಂದ ಪ್ರತಿಭಟನೆ

ಕಾಸರಗೋಡು: ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಐಎನ್‍ಟಿಯುಸಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ನಗರದ ಮುಖ್ಯ ಅಂಚೆ ಕಚೇರಿ ಎದುರು ಪ್ರತಿಭಟನೆ  ನಡೆಯಿತು. ಐಎನ್‍ಟಿಯುಸಿ ಜಿಲ್ಲಾಧ್ಯಕ್ಷ ಪಿ.ಜಿ ದೇವ್ ಧರಣಿ ಉದ್ಘಾಟಿಸಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರಮೋದಿ ಘೋಷಿಸಿರುವ ಆರ್ಥಿಕ ತುರ್ತುಸ್ಥಿತಿ ಮತ್ತು ಲಾಕ್‍ಡೌನ್ ದೇಶದ ಕಾರ್ಮಿಕರು ಮತ್ತು ಸಾಮಾನ್ಯ ಜನರನ್ನು ವಂಚಿಸುವ ಮತ್ತು ಭಾರತವನ್ನು ಬಂಡವಾಳಶಾಹಿ ಸಮಾಜಕ್ಕೆ ಅಧೀನಗೊಳಿಸುವ ರಹಸ್ಯ ಅಜೆಂಡವಾಗಿದೆ ಎಂದು ತಿಳಿಸಿದರು. 


ಪಶ್ಚಿಮ ಏಷ್ಯಾದಲ್ಲಿ ಯುದ್ಧದ ನೆಪದಲ್ಲಿ ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಮತ್ತು ಅನಿಲದ ಬೆಲೆಗಳನ್ನು ಹೆಚ್ಚಿಸಿರುವುದರಿಂದ, ಅನೇಕ ಹೋಟೆಲ್‍ಗಳು ಮತ್ತು ವಾಣಿಜ್ಯ ಸಂಸ್ಥೆಗಳು ಮುಚ್ಚುವ ಹಂತದಲ್ಲಿವೆ.  ಕಾರ್ಮಿಕರು ತಮ್ಮ ಉದ್ಯೋಗಕಳೆದುಕೊಮಡಿದ್ದರೆ, ಇತರ ರಾಜ್ಯಗಳ ಕಾರ್ಮಿಕರು ತಮ್ಮ ಆದಾಯ ಮತ್ತು ಉದ್ಯೋಗಗಳನ್ನು ಬಿಟ್ಟು ರಾಜ್ಯವನ್ನು ತೊರೆಯುತ್ತಿದ್ದಾರೆ. ಬೆಲೆ ಏರಿಕೆ ನಿಯಂತ್ರಣ, ಅನಿಲ ಸಿಲಿಂಡರ್‍ಗಳ ಕಾಳಸಂತೆ ತಡೆಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.  ಐಎನ್‍ಟಿಯುಸಿ ರಾಜ್ಯ ಸಮಿತಿ ನಿರ್ದೇಶದನ್ವಯ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಟಿ.ವಿ.ಕುಞÂರಾಮನ್ ಅಧ್ಯಕ್ಷತೆ ವಹಿಸಿದ್ದರು.   

ಎನ್ ಗಂಗಾಧರನ್,  ಥಾಮಸ್ ಸೆಬಾಸ್ಟಿಯನ್, ಸಿವಿ ಭಾವನನ್, ಅರ್ಜುನನ್ ತಾಯಿಲಂಗಡಿ,  ಸಮೀರ ಖಾದರ್,  ಪವಿತ್ರನ್ ಸಿ ನಾಯರ್, ಮಾಧವನ್ ನಾಯರ್, ಎಂ ಕೆ ಎಂ ವಿ ಪದ್ಮನಾಭನ್ ಬಿಜು ಜಾನ್ ಸಿಜಿ ಟೋನಿ ಸತ್ಯನ್ ಶ್ರೀ ಉಪ್ಪಳ ಬಿ.ಪಿ ಮಹಾರಾಜ್ ಸುರೇಶ್ ಕುಮಾರ್ ಚೀಮೇನಿ, ಅಬ್ದುಲ್ ರಜಾಕ್ ಪುರುಷೋತ್ತಮನ್ ನಾಯರ್, ಎ ಕುಞಂಬು, ಪಿ ಬಾಲಕೃಷ್ಣನ್,  ಚಂದುಕುಟ್ಟಿ ಪೆÇಯುತ್ತಳ,  ಶಾಹುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂಮೊದಲು ಅಡುಗೆ ಅನಿಲ ಸಿಲಿಂಡರ್‍ನೊಂದಿಗೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಮಹಿಳೆಯರ ಸಹಿತ ನೂರರು ಮಂದಿ ಪಾಲ್ಗೊಂಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries