ಭಾರತದ ಷೇರು ಮಾರುಕಟ್ಟೆ ನಿಯಂತ್ರ ಅಥಾರಿಟಿ ಸೆಬಿ (SEBI) ಇದೀಗ ಮಹತ್ವದ ನಿರ್ಧಾರ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ಇಂಧನ ಮಿತ ಬಳಕೆಗೆ ಕರೆ ನೀಡಿದ ಬಳಿಕ ಸಭೆ ಸೇರಿದ ಸೆಬಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಅನುಮತಿಸಿದೆ. ಪರಿಸ್ಥಿತಿ ಸುಧಾರಿಸುವ ವರೆಗೆ ಅಂದರೆ ತಾತ್ಕಾಲಿಕವಾಗಿ ಸೆಬಿ ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಜಾರಿಗೊಳಿಸಿದೆ.

ಸೆಬೆ ಕಚೇರಿಯಲ್ಲಿನ ಹಲವು ವಿಭಾಗದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಲಾಗಿದೆ. ವಾರದಲ್ಲಿ ಒಂದು ದಿನ ಸೇರಿದಂತೆ ಹಲವು ರೀತಿಯಲ್ಲಿ ವರ್ಕ್ ಫ್ರಮ್ ಹೋಮ್ ಜಾರಿಗೊಳಿಸಲಾಗುತ್ತಿದೆ. ತಾತ್ಕಾಲಿಕವಾಗಿ ಈ ನಿಯಮ ಜಾರಿಗೊಳಿಸಲಾಗಿದೆ. ಇದೇ ವೇಳೆ ಕಚೇರಿಗೆ ಬರಲೇಬೇಕಿರುವ ಸಿಬ್ಬಂದಿಗಳಿಗೆ ಈ ನಿಯಮ ಅನ್ವಯಸುವುದಿಲ್ಲ.

ಮೇ.25ರಿಂದ ಸೆಬಿ ತನ್ನ ಕಚೇರಿ ಉದ್ಯೋಗಳಿಗೆ ವರ್ಕ್ ಫ್ರಮ್ ಹೋಮ್ ಅನುಮತಿಸಿದೆ. ಆದರೆ ಹಿರಿಯ ಅಧಿಕಾರಿಗಳು ಸೇರಿದಂತೆ ಕೆಲ ಉದ್ಯೋಗಿಗಳು ಕಚೇರಿಗೆ ಆಗಮಿಸಬೇಕಿದೆ. ಪ್ರಮುಖವಾಗಿ ಗ್ರೇಡ್ ಎ ನಿಂದ ಗ್ರೇಡ್ ಸಿ ವರೆಗಿನ ಉದ್ಯೋಗಿಗಳಿಗೆ ವಾರದಲ್ಲಿ ಒಂದು ದಿನ ವರ್ಕ್ ಫ್ರಮ್ ಹೋಮ್ ಅನುಮತಿಸಲಾಗಿದೆ.

ಇದೇ ವೇಳೆ ವಿವೆದೆಡೆ, ಕಾನ್ಫರೆನ್ಸ್ ಕೊಠಡಿಗಳಲ್ಲಿ ಆಯೋಜನೆಗೊಳ್ಳುತ್ತಿದ್ದ ಸಭೆಗಳನ್ನು ಆನ್‌ಲೈನ್ ಮೂಲಕ ವರ್ಚುವಲ್ ಮಾಡಲಾಗುತ್ತಿದೆ. ಅನಗತ್ಯ ಪ್ರಯಾಣ, ಮೀಟಿಂಗ್‌ಗಳನ್ನು ಕಡಿತ ಮಾಡಲಾಗುತ್ತಿದೆ. ಶೇಕಡಾ 50ರಷ್ಟು ಉದ್ಯೋಗಿಗಳು ಕಚೇರಿಯಲ್ಲಿರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ, ಹಿರಿಯ ಉದ್ಯೋಗಿಳಿಗೆ ಸೂಚನೆ ನೀಡಲಾಗಿದೆ.

ಉದ್ಯೋಗಿಳಿಗೆ ಆಯೋಜಿಸಿದ್ದ ಕೆಲ ತರಬೇತಿ ಕಾರ್ಯಗಾರಗಳನ್ನು ಮುಂದೂಡಲಾಗಿದೆ. ಇದೇ ವೇಳೆ ಹಲವು ಹೂಡಿಕೆ ಹಾಗೂ ಬಂಡವಾಳ ಕುರಿತು ಕಾರ್ಯಗಾರಗಳನ್ನು ಮುಂದಿನ 8 ವಾರಗಳ ಕಾಲ ಮುಂದೂಡಲಾಗಿದೆ. ಇದೇ ವೇಳೆ ಸಾರ್ವಜನಿಕ ಸಾರಿಗೆಯನ್ನು ಬಳಸಲು ಸೂಚಿಸಿದೆ.

