HEALTH TIPS

ಕಾಳ್ಯಂಗಾಡು ಶ್ರೀಮೂಕಾಂಬಿಕಾ ಕ್ಷೇತ್ರದಲ್ಲಿ ವೈಭವದ ಬ್ರಹ್ಮಕಲಶೋತ್ಸವ

ಕಾಸರಗೋಡು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಶ್ರೀಮೂಕಾಂಬಿಕಾಮಾತೆಗೆ ಬ್ರಹ್ಮಕಲಶೋತ್ಸವ ವೈಭವದಿಂದ ನೆರವೇರಿತು. ತಂತ್ರಿವರ್ಯ ಶ್ರೀ ಕೃಷ್ಣ ಗುರೂಜಿ ಕುಕ್ಕಾಜೆ ಅವರು ನೇತೃತ್ವ ವಹಿಸಿದ್ದರು. 


ಕಾರ್ಯಕ್ರಮದ ಅಂಗವಾಗಿ ಗಣಪತಿ ಹೋಮ, ಸಾಮೂಹಿಕ ಪ್ರಾರ್ಥನೆ, ಕವಾಟೋದ್ಘಾಟನೆ, ಶ್ರೀದೇವಿ ಹಾಗೂ ಪರಿವಾರ ದೈವ ದೇವರುಗಳಿಗೆ ಬ್ರಹ್ಮಕಲಶಭಿಷೇಕ, ನೈಮಿತ್ತಿಕೆ ಕಾರ್ಯಗಳ ನಿರ್ಣಯ ಮತ್ತು ಮಹಾಪೂಜೆ ನಡೆಯಿತು. ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ಧರ್ಮದರ್ಶಿ ನಾರಾಯಣ ಕಾಳ್ಯಂಗಾಡು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಸಲಹಾ ಸಮಿತಿಯ ರಘು ಮೀಪುಗುರಿ, ಭಾಸ್ಕರ ಕಾಳ್ಯಂಗಾಡು, ಬ್ರಹ್ಮಕಲಶೋತ್ಸವ ಸಮಿತಿ ಪ್ರದಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲು, ಕಾರ್ಯದರ್ಶಿಗಳಾದ ರಂಜಿತ್ ಮನ್ನಿಪ್ಪಾಡಿ, ಗೋವಿಂದ ನಾಯ್ಕ್ ಕಾಳ್ಯಂಗಾಡು, ಕೋಶಾಧಿಕಾರಿ ಶಾಂತಕುಮಾರ್ ಮುಂಡ್ಯತ್ತಡ್ಕ, ಜತೆ ಕೋಶಾಧಿಕಾರಿ ಪುನೀತ್ ಕೆಮ್ಮಣ್ಣು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನರಾಜ್ ಕಾಳ್ಯಂಗಾಡು, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್., ಮಾತೃ ಸಮಿತಿ ಮತ್ತು ಇತರ ಸಮಿತಿಗಳ ಪದಾಧಿಕಾರಿಗಳು ಮತ್ತು ಸಮಸ್ಯರು, ಆಸ್ತಿಕ ವೃಂದದವರು ಮೊದಲಾದವರು ಉಪಸ್ಥಿತರಿದ್ದರು. 

ಶ್ರೀ ಸರಸ್ವತಿ ಮಂಟಪದಲ್ಲಿ ವಿವಿಧ ತಂಡಗಳಿಂದ ಭಜನೆ, ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಜಯರಾಮ ಭಟ್ ದೇವಸ್ಯ ಮತ್ತು ಬಳಗದವರಿಂದ ಯಕ್ಷಗಾನ ತಾಳಮದ್ದಳೆ ಜರುಗಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries