ಕಾಸರಗೋಡು: ಮ್ಯಾಟ್ರಿಮೋನಿ ಸೈಟ್‍ನಲ್ಲಿ ಪರಿಚಯಗೊಂಡ ಯುವತಿಯ ಮಾನಭಂಗ ಗೈದಿರುವ ಬಗ್ಗೆ ನಿವಾಸಿಯಾದ ಮುಹಮ್ಮದ್ ಶಮ್ಮಾಸ್ ಎಂಬಾತನ ವಿರುದ್ಧ ಕಾಸರಗೋಡು ಮಹಿಳಾ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ವಿದ್ಯಾನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 32ರ ಹರೆಯದ ಯುವತಿ ನೀಡಿದ ದೂರಿನನ್ವಯ ಈ ಕೇಸು ದಾಖಲಿಸಲಾಗಿದೆ.
ಮ್ಯಾಟ್ರಿಮೋನಿ ಸೈಟ್ ಮೂಲಕ ಯುವತಿ ಹಾಗೂ ಮುಹಮ್ಮದ್ ಶಮ್ಮಾಸ್ ಪರಿಚಯಗೊಂಡಿದ್ದರು. ಬಳಿಕ ಯುವತಿಗೆ ವಿವಾಹ ಭರವಸೆ ನೀಡಿ 8 ಲಕ್ಷ ರೂ. ಹಣವನ್ನು ವಸೂಲು ಮಾಡಿ ಮಾನಭಂಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಶಮ್ಮಾಸ್ ಈಕೆಯಿಂದ ದೂರ ಉಳಿದಿದ್ದು, ಈಕೆಯಿಂದ ಸಂಬಂಧ ಕಡಿದುಕೊಳ್ಳಲು ಯತ್ನಿಸಿದ್ದಾನೆ. ಇದರಿಂದಾಗಿ ತಾನು ವಂಚನೆಗೊಳಗಾಗಿರುವ ಬಗ್ಗೆ ಯುವತಿಗೆ ಮನವರಿಕೆಯಾದ ಹಿನ್ನೆಲೆಯಲ್ಲಿ ಪೋಲೀಸರಿಗೆ ದೂರು ನೀಡಿದ್ದಾಳೆ.

