HEALTH TIPS

ಗ್ರೇಟ್ ನಿಕೋಬಾರ್ ಯೋಜನೆ ವಿರೋಧಿಸಿ ರಕ್ಷಣಾ ಸಚಿವರಿಗೆ ಪತ್ರ ಬರೆದ ಜೈರಾಮ್ ರಮೇಶ್

 ನವದೆಹಲಿ: ಗ್ರೇಟ್ ನಿಕೋಬಾರ್ ಯೋಜನೆಯು ಪರಿಸರ ವಿಕೋಪಕ್ಕೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್ ‌‌ಅವರು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.


ಈ ಪತ್ರವನ್ನು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಜೈರಾಮ್ ರಮೇಶ್ ‌‌ಹಂಚಿಕೊಂಡಿದ್ದಾರೆ.

ಯೋಜನೆಯ ಅನುಮತಿ ಪ್ರಕ್ರಿಯೆಯ ಭಾಗವಾಗಿ ಅರಣ್ಯ ಹಕ್ಕುಗಳ ಕಾಯ್ದೆ, 2006ರ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ. ಅದರೊಂದಿಗೆ ಬುಡಕಟ್ಟು ಸಮುದಾಯಗಳ ಹಕ್ಕನ್ನು ಕೂಡ ಕಸಿದುಕೊಳ್ಳುತ್ತದೆ. ಈ ಕುರಿತು ಮೇ 13ರಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರಿಗೆ ಪತ್ರ ಬರೆದಿದ್ದೆ. ಇದೀಗ ರಕ್ಷಣಾ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.

ಈ ಯೋಜನೆಯು ಮೂಲಭೂತವಾಗಿ ವಾಣಿಜ್ಯೋದ್ಯಮಕ್ಕೆ ಸಹಾಯ ಮಾಡುತ್ತದೆ. ಇದರಿಂದ ಹೆಚ್ಚಿನ ಪರಿಸರ ಹಾನಿಯಾಗುತ್ತದೆ. ಹಾಗಾಗಿ, ಸಾರ್ವಜನಿಕ ಟೀಕೆಗಳನ್ನು ಹತ್ತಿಕ್ಕುವ ಉದ್ದೇಶದಿಂದ ಕೇಂದ್ರ ಸರ್ಕಾರವು, ಇದಕ್ಕೆ ಭದ್ರತಾ ಕಾರಣಗಳನ್ನು ನೀಡುತ್ತಿದೆ ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.

ಭಾರತದ ರಕ್ಷಣಾ ವಲಯವನ್ನು ಬಲಪಡಿಸುವ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ, ಗ್ರೇಟ್ ನಿಕೋಬಾರ್ ಯೋಜನೆಯ ಕುರಿತು ನಮಗೆ ಆಕ್ಷೇಪವಿದೆ. ಇದನ್ನು ಯಾವ ರೀತಿ ಬದಲಾಯಿಸಬಹುದು ಎನ್ನುವ ಕುರಿತು ನೌಕಾಪಡೆಯ ಅಧಿಕಾರಿಗಳು ಕೆಲವು ಕ್ರಮಗಳನ್ನು ತಿಳಿಸಿದ್ದಾರೆ. ಆ ಮೂಲಕ ಆ ಸೂಕ್ಷ್ಮ ಪ್ರದೇಶದಕ್ಕೆ ಹಾನಿ ಮಾಡದೇ, ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬಹುದು ಎಂದು ಹೇಳಿದ್ದಾರೆ.

ಕೇಂದ್ರಕ್ಕೆ ನಿಜವಾಗಿಯೂ ಒಳ್ಳೆಯ ಉದ್ದೇಶವಿದ್ದರೆ, ಈ ಸಲಹೆಗಳನ್ನು ಪರಿಗಣಿಸಬಹುದು. ಗ್ರೇಟ್ ನಿಕೋಬಾರ್ ದ್ವೀಪದ ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿರುವ ಐಎನ್‌ಎಸ್ ಬಾಜ್ ಅನ್ನು ಜುಲೈ 2012 ರಲ್ಲಿ ನಿಯೋಜಿಸಲಾಯಿತು. ಆದರೆ, ಈಗಿರುವ ರನ್‌ವೇಯ ಉದ್ದವನ್ನು ಕನಿಷ್ಠ ಮೂರು ಪಟ್ಟು ಹೆಚ್ಚಿಸುವ ಮತ್ತು ನೌಕಾ ನೆಲೆಯನ್ನು ನಿರ್ಮಿಸುವ ಯೋಜನೆಗಳು ಸುಮಾರು ಐದು ವರ್ಷಗಳಿಂದ ಅನುಮೋದನೆಗಾಗಿ ಕಾಯುತ್ತಿವೆ. ಈ ಯೋಜನೆಗಳು ಪರಿಸರದ ಮೇಲೆ ಕಡಿಮೆ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.

ಇದರೊಂದಿಗೆ ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಕಮಾಂಡ್ ಸೆಂಟರ್‌ಗಳಿಗೆ ಸೇರಿದ ಕೆಲವು ಸ್ವತ್ತುಗಳಿವೆ. ಅವುಗಳನ್ನು ವಿಸ್ತರಿಸುವ ಅವಕಾಶವಿದೆ. ಇದರಲ್ಲಿ ಐಎನ್‌ಎಸ್ ಕಾರ್ಡಿಪ್, ಐಎನ್‌ಎಸ್ ಕೊಹಾಸ್ಸಾ, ಐಎನ್‌ಎಸ್ ಉತ್ಕ್ರೋಶ್, ಐಎನ್‌ಎಸ್ ಜರಾವಾ ಮತ್ತು ಕಾರ್ ನಿಕೋಬಾರ್ ವಾಯುಪಡೆ ನಿಲ್ದಾಣಗಳು ಸೇರಿವೆ. ಗ್ರೇಟ್ ನಿಕೋಬಾರ್ ದ್ವೀಪ ಯೋಜನೆಯ ಅತ್ಯಗತ್ಯ ಭಾಗವಾಗಿರುವ ಟ್ರಾನ್ಸ್‌ಶಿಪ್‌ಮೆಂಟ್ ಬಂದರು ಮತ್ತು ಪಟ್ಟಣವು ನಮ್ಮ ದೇಶದ ಮಿಲಿಟರಿ ಸಾಮರ್ಥ್ಯವನ್ನು ಯಾವುದೇ ರೀತಿಯಲ್ಲಿ ಹೆಚ್ಚಿಸುವುದಿಲ್ಲ ಎಂದು ಹೇಳಿದ್ದಾರೆ.

ರಕ್ಷಣಾ ಸಚಿವರು ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಜೈರಾಮ್ ರಮೇಶ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಮೇ 1ರಂದು ಕೇಂದ್ರ ಸರ್ಕಾರವು 'ದಿ ಗ್ರೇಟ್ ನಿಕೋಬಾರ್ ದ್ವೀಪ ಯೋಜನೆ' ಎನ್ನುವ ಪ್ರಕಟಣೆಯನ್ನು ಬಿಡುಗಡೆಗೊಳಿಸಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಹಲವು ನಾಯಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮಾಜಿ ಪರಿಸರ ಸಚಿವರಾಗಿರುವ ಜೈರಾಮ್ ರಮೇಶ್ ‌‌ಕೂಡ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries