ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಚುನಾವಣಾ ಪ್ರಚಾರ ಬೋರ್ಡನ್ನು ಸ್ಪೋಟಕ ಸಿಡಿಸಿ ನಾಶಗೊಳಿಸಿದ ಬಳಿಕ ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ ಆರೋಪದಂತೆ ಕುಂಬಳೆ ಠಾಣೆ ಪೆÇಲೀಸರು ಇನ್‍ಸ್ಟಾಗ್ರಾಮ್‍ನ 'ವಲಿಯೇಟನ್'ಎಂಬ ಖಾತೆದಾರನ ವಿರುದ್ಧ ಸ್ವ ಇಚ್ಛೆಯಿಂದ ಕೇಸು ದಾಖಲಿಸಿಕೊಂಡಿದ್ದಾರೆ.
ಚುನಾವಣಾ ಪ್ರಚಾರ ಬೋರ್ಡ್‍ನಲ್ಲಿ ವ್ಯಕ್ತಿಯ ಹತ್ಯೆ ನಡೆಸುವ ರೀತಿಯ ವಾಕ್ಯಗಳನ್ನು ಬರೆದ ಬಳಿಕ ಸ್ಪೋಟಕ ಸಿಡಿಸಿ ಪ್ರಚಾರ ಬೋರ್ಡ್ ನಾಶಗೊಳಿಸಿದ್ದು, ಆ ದೃಶ್ಯಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪ್ರಚಾರ ಮಾಡಲಾಗಿದೆ. ಪ್ರಚೋದನೆ ಸೃಷ್ಟಿಸಿ ಗಲಭೆ ಉಂಟುಮಾಡಲು ಪ್ರಯತ್ನಿಸಿರುವುದಾಗಿಯೂ ಪೊಲೀಸರು ದಾಖಲಿಸಿಕೊಂಡ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳ ಪತ್ತೆಗೆ ಸೈಬರ್‍ಸೆಲ್ ಪೆÇಲೀಸ್‍ನ ಸಹಾಯದೊಂದಿಗೆ ಕುಂಬಳೆ ಪೆÇಲೀಸರು ತನಿಖೆ ಆರಂಭಿಸಿದ್ದಾರೆ. ಐಕ್ಯರಂಗ ಅಭ್ಯರ್ಥಿ ಎ.ಕೆ.ಎಂ ಅಶ್ರಫ್ ವಿಜಯೋತ್ಸವದ ಮರೆಯಲ್ಲಿ ಕೃತ್ಯವೆಸಗಲಾಗಿದೆ.


.jpg)
