ಸಮರಸ ಚಿತ್ರಸುದ್ದಿ: ಕೇರಳಂ ರಾಜ್ಯದ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಮೂವರು ಅಭ್ಯರ್ಥಿಗಳು ವಿಧಾನಸಬೆಗೆ ಆಯ್ಕೆಯಾಗಿದ್ದು, ಗೆಲುವು ಸಾಧಿಸಿದ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್‍ಚಂದ್ರಶೇಖರ್, ಕೇಂದ್ರದ ಮಾಜಿ ಸಚಿವ, ಬಿಜೆಪಿ ಕೇರಳ ಘಟಕ ಮಾಜಿ ರಾಜ್ಯಾಧ್ಯಕ್ಷ ವಿ. ಮುರಳೀಧರನ್, ಹಾಗೂ ಬಿ.ಬಿ ಗೋಪಕುಮಾರ್ ಬುಧವಾರ ತಿರುವನಂತಪುರದ ಮಾರಾರ್‍ಜಿ ಭವನದಲ್ಲಿ ಬಿಜೆಪಿಯ ಧೀಮಂತ ನೇತಾರ ಕೆ.ಜಿ ಮಾರಾರ್ ಅವರ ಪುತ್ಥಳಿಗೆ ಪುಷ್ಪಾರ್ಚನೆ ನಡೆಸಿ, ಗೌರವ ಸಲ್ಲಿಸಿದರು.


