ಋಷಿಕೇಶ: ಉತ್ತರಾಖಂಡನ ಋಷಿಕೇಶ ಬಳಿಯ ಖಾಂಡ್‌ಗಾಂವ್ ಎಂಬ ಗ್ರಾಮದ ಹತ್ತಿರ ಉಜ್ಜೆಯಿನಿ ಎಕ್ಸ್‌ಪ್ರೆಸ್ ರೈಲು ಸೋಮವಾರ ರಾತ್ರಿ ಹಳಿ ತಪ್ಪಿದೆ.
ಹಳಿ ತಪ್ಪಿದ ಪರಿಣಾಮ ಮೂರು ಬೋಗಿಗಳಿಗೆ ಹಾನಿಯಾಗಿದೆ. ಆದರೆ ಈ ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.
ಉಜ್ಜೆಯಿನಿ ಎಕ್ಸ್‌ಪ್ರೆಸ್ ರೈಲು ಸೋಮವಾರ ಮಧ್ಯಾಹ್ನ ಋಷಿಕೇಶ ತಲುಪಿ ಪ್ರಯಾಣಿಕರನ್ನಿಳಿಸಿ ಅಲ್ಲಿಂದ ರೈಲು ಯಾರ್ಡ್‌ಗೆ ತೆರಳುತಿತ್ತು.
ಈ ವೇಳೆ ಖಾಂಡ್‌ಗಾಂವ್ ಬಳಿ ಹಳಿ ತಪ್ಪಿ ಬೋಗಿಗಳಿಗೆ ಹಾನಿಯಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು ಘಟನೆಗೆ ಕಾರಣ ಏನೆಂಬುದನ್ನು ತನಿಖೆ ನಡೆಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

