HEALTH TIPS

Manipur | ಉಖ್ರುಲ್‌ ನಲ್ಲಿ 23 ಬಂಕರ್‌ ಗಳ ಧ್ವಂಸ; ಟೆಂಗ್ನೌಪಾಲ್‌ನಲ್ಲಿ 18 ಐಇಡಿಗಳು ವಶ

ಇಂಫಾಲ್: ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ 23 ಅಕ್ರಮ ಬಂಕರ್‌ ಗಳನ್ನು ಭದ್ರತಾ ಪಡೆಗಳು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಧ್ವಂಸಗೊಳಿಸಿದ್ದು, ಟೆಂಗ್ನೌಪಾಲ್ ಜಿಲ್ಲೆಯಲ್ಲಿ 18 ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿಗಳು) ವಶಪಡಿಸಿಕೊಂಡಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಲಿಟನ್ ಪೊಲೀಸ್ ಠಾಣೆ ವ್ಯಾಪ್ತಿಯ ಮೊಂಗ್ಕೋಟ್ ಚೆಪು, ಶಾಂಗ್ಫೆಲ್, ಮುಲ್ಲಮ್, ಸಿರಾರಾಖೋಂಗ್ ಹಾಗೂ ರಿಂಗು ಬೆಟ್ಟದ ಹಳ್ಳಿಗಳಲ್ಲಿ ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಈ ಬಂಕರ್‌ ಗಳನ್ನು ಧ್ವಂಸಗೊಳಿಸಲಾಗಿದೆ. ಪ್ರದೇಶದಲ್ಲಿನ ಉಗ್ರಗಾಮಿ ನೆಲೆಗಳನ್ನು ನಿರ್ಮೂಲಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳೆ 12-ಬೋರ್ ಪಂಪ್ ಆಕ್ಷನ್ ಗನ್, ವಿವಿಧ ಕ್ಯಾಲಿಬರ್‌ ಗಳ 17 ಕಾರ್ಟ್ರಿಡ್ಜ್‌ ಗಳು ಹಾಗೂ ಗುಂಡು ಹಾರಿಸಿದ 111 ಖಾಲಿ ಕಾರ್ಟ್ರಿಡ್ಜ್ ಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಈ ವರ್ಷದ ಫೆಬ್ರವರಿಯಲ್ಲಿ ಉಖ್ರುಲ್ ಜಿಲ್ಲೆಯಲ್ಲಿ ತಂಗ್ಖುಲ್ ನಾಗಾ ಮತ್ತು ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದಿದ್ದು, ಗುಂಡಿನ ದಾಳಿ ಘಟನೆಗಳಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ 30ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

ಈ ಮಧ್ಯೆ, ಬುಧವಾರ ಟೆಂಗ್ನೌಪಾಲ್ ಜಿಲ್ಲೆಯ ಮೊರೆಹ್ ಪೊಲೀಸ್ ಠಾಣೆ ವ್ಯಾಪ್ತಿಯ ಟಿ ಬೊಂಗ್ಮೋಲ್ ಗ್ರಾಮದಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳ ಸಂಗ್ರಹವನ್ನು ವಶಪಡಿಸಿಕೊಂಡಿವೆ.

ಈ ವೇಳೆ ಎರಡು ಸಿಂಗಲ್-ಬ್ಯಾರೆಲ್ ರೈಫಲ್‌ ಗಳು, ನಾಲ್ಕು 9 ಎಂಎಂ ಪಿಸ್ತೂಲ್‌ಗಳು, ಮ್ಯಾಗಝೀನ್‌ಗಳು ಹಾಗೂ 18 ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸ್ಫೋಟಕಗಳನ್ನು ಸ್ಥಳದಲ್ಲೇ ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries