ಕೋಝಿಕ್ಕೋಡ್: ಕ್ಯಾಪ್ಸೂಲ್ ರೂಪದಲ್ಲಿ ಸಾಗಿಸಲು ಯತ್ನಿಸಿದ 1,054 ಗ್ರಾಂ ಚಿನ್ನದ ಮಿಶ್ರಣವನ್ನು ಕರಿಪ್ಪೂರ್ ವಿಮಾನ ನಿಲ್ದಾಣದಿಂದ ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ. ಕಣ್ಣೂರು ಕೊಳತ್ತುವಯಲ್ ಅಂಜಾಂಪೀಡಿಗ ನಿವಾಸಿ ತಸ್ಲೀಮ್ ಪಾರಕ್ಕಲ್ (32) ಮತ್ತು ಈತನನ್ನು ಕರೆದೊಯ್ಯಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವಡಕರ ನಿವಾಸಿಗಳಾದ ಎ. ರಬೀಶ್ (37), ಆಶಿಮ್ (56) ಬಂಧಿತರು.
ದುಬೈ ರಾಸಲ್ ಖೈಮಾದಿಂದ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನದಲ್ಲಿ ತಸ್ಲೀಮ್ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ನಡಿಗೆಯಲ್ಲಿ ಸಂಶಯಗೊಂಡು ಅಧಿಕಾರಿಗಳು ದೇಹ ತಪಾಸಣೆ ನಡೆಸಿದಾಗ ದೇಹದಲ್ಲಿಬಚ್ಚಿಟ್ಟುಕೊಂಡು ಸಾಗಿಸಲು ಯತ್ನಿಸಿದ ನಾಲ್ಕು ಕ್ಯಾಪ್ಸೂಲ್ ರೂಪದಲ್ಲಿದ್ದ 131 ಪವನ್ ಚಿನ್ನದ ಮಿಶ್ರಣವನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ತಕ್ಷಣ ವಿಮಾನ ನಿಲ್ದಾಣ ವಠಾರದಲ್ಲಿ ಈತನನ್ನು ಕರೆದೊಯ್ಯಲು ಆಗಮಿಸಿದ್ದ ರಬೀಶ್ ಹಾಗೂ ಆಶಿಂ ಎಂಬವರನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ.


