ಕಾಸರಗೋಡು: ಮಾದಕದ್ರವ್ಯ ವಿರುದ್ಧ ರಾಜ್ಯ ಗೃಹ ಇಲಾಖೆ ಆರಂಭಿಸಿರುವ 'ಆಪರೇಶನ್ ತೂಫಾನ್' ಕಾರ್ಯಾಚರಣೆಯನ್ವಯ ಜೂನ್ 1ರಿಂದ ಈತನಕ ಜಿಲ್ಲೆಯ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಒಟ್ಟು 106 ಪ್ರಕರಣಗಳು ದಾಖಲಾಗಿದ್ದು ಇದಕ್ಕೆ ಸಂಬಂಧಿಸಿ 113 ಮಂದಿಯನ್ನು ಸೆರೆಹಿಡಿಯಲಾಗಿದೆ.
ಈ ಕಾಲಾವಧಿಯಲ್ಲಿ 210 ಗ್ರಾಂ ಗಾಂಜಾ, 110ಗ್ರಾಂ ಎಂಡಿಎಂಎ, 1.25 ಗ್ರಾಂ ಬ್ರೌನ್ ಶುಗರ್, 70 ಕಿಲೋ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿಷೇಧಿತ ತಂಬಾಕು ಒಳಗೊಂಡ ಪಾನ್ ಮಸಾಲೆ ಉತ್ಪನ್ನ ತಯಾರಿ ಕೇಂದ್ರಕ್ಕೆ ದಾಳಿ ನಡೆಸಿದ ಮೇಲ್ಪರಂಬ ಠಾಣೆ ಪೆÇಲೀಸರು ಅಲ್ಲಿಂದ 14 ಗೋಣಿ ಚೀಲಗಳಲ್ಲಿ ತುಂಬಿಸಿ ಇಡಲಾಗಿದ್ದ ಪಾನ್ ಮಸಾಲೆ ಪ್ಯಾಕೆಟ್‍ಗಳು, ಯಂತ್ರೋಪಕರಣ ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದರು.
2025 ಜನವರಿ 1ರಿಂದ ಜೂನ್ 20ರ ಕಾಲಾವಧಿಯಲ್ಲಿ ಜಿಲ್ಲೆಯ ಪೆÇಲೀಸರು ಮತ್ತು ಅಬಕಾರಿ ವಿಭಾಗ ಪ್ರತ್ಯೇಕವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 1963 ಪ್ರಕರಣಗಳು ದಾಖಲಾಗಿವೆ. ಒಟ್ಟು 1531 ಕ್ರಿಮಿನಲ್ ಮತ್ತು ಅಬಕಾರಿ ವಿಭಾಗದಲ್ಲಿ 432 ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಸಂಬಂಧಿಸಿ ಪೆÇಲೀಸರು 1719 ಮಂದಿ ಹಾಗೂ ಅಬಕಾರಿ ತಂಡ 398 ಮಂದಿಯನ್ನು ಬಂಧಿಸಿದ್ದಾರೆ.



