ಕಾಸರಗೋಡು: ಆಪರೇಶನ್ ತೂಫಾನ್ ಕಾರ್ಯಾಚರಣೆಯ ಅಂಗವಾಗಿ ರಾಜ್ಯಾದ್ಯಂತ ನಡೆಸಿದ ತಪಾಸಣೆಯಲ್ಲಿ ಒಂದೇ ದಿನ 137 ಮಂದಿಯನ್ನು ಬಂಧಿಸಲಾಗಿದೆ. ಜತೆಗೆ ನಿಷೇಧಿತ ಮಾದಕ ವಸ್ತು ಕೈವಶವಿರಿಸಿದ ಆರೋಪದಂತೆ 126 ಪ್ರಕರಣ ದಾಖಲಿಸಲಾಗಿದೆ. ಬಂಧಿತರಿಂದ ಒಟ್ಟು 2.680 ಗ್ರಾಂ ಎಂಡಿಎಂಎ, 59.265 ಕಿಲೋ ಗ್ರಾಂ ಗಾಂಜಾ, 4.0 ಗ್ರಾಂ ಹ್ಯಾಶಿಶ್ ಆಯಿಲ್, 3 ಗಾಂಜಾ ಗಿಡಗಳನ್ನು ವಶಪಡಿಸಲಾಗಿದೆ. ಆಪರೇಶನ್ ತೂಫಾನ್ ಅಂಗವಾಗಿ ಇದುವರೆಗೆ 3080 ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ 3313 ಮಂದಿ ಬಂಧಿಸಲಾಗಿದೆ. ಗೃಹಸಚಿವ ರಮೇಶ್ ಚೆನ್ನಿತ್ತಲ ಅವರು ಅಧಿಕಾರ ವಹಿಸಿಕೊಂಡಂದಿನಿಂದ ಆಪರೇಶನ್ ತೂಫಾನ್ ಮೂಲಕ ರಾಜ್ಯಾದ್ಯಂತ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.


