ಮುಳ್ಳೇರಿಯ: ಸಹೋದರಿಯನ್ನು ಕೊಲೆಗೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ನಂತರ ಬಿಡುಗಡೆಗೊಂಡ ವ್ಯಕ್ತಿಯ ಮೃತದೇಹ ಮನೆಯಲ್ಲಿ ನಿಗೂಢವಾಗಿ ಪತ್ತೆಯಾಗಿದೆ. ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಡೂರು ಚಾಮೆಕೊಚ್ಚಿ ಶ್ರೀಕೃಷ್ಣ ನಿಲಯದ ರಘುರಾಮ ರಾವ್ ಎಂಬವರ ಪುತ್ರ ಕೃಷ್ಣ ಪ್ರಸಾದ್ (34) ಮೃತಪಟ್ಟ ವ್ಯಕ್ತಿ.
ಕೃಷ್ಣಪ್ರಸಾದ್ ಮೃತದೇಹ ಶನಿವಾರ ಸಂಜೆ ಮನೆಯೊಳಗೆ ನೆಲದಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯೊಳಗಿಂದ ದುರ್ಗಂಧ ವ್ಯಾಪಿಸುತ್ತಿದ್ದ ಹಿನ್ನೆಲೆಯಲ್ಲಿ ಪರಿಸರದ ನಿವಾಸಿಗಳು ಬಂದು ನೋಡಿದಾಗ ಶವ ಪತ್ತೆಯಾಗಿತ್ತು. ನಂತರ ಗ್ರಾಮ ಪಂಚಾಯಿತಿ ಸದಸ್ಯೆ ನೀಡಿದ ದೂರಿನನ್ವಯ ಆದೂರು ಠಾನೆ ಪೆÇಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಶವಮಹಜರು ನಡೆಸಲಾಗಿದೆ. ವಿಷ ಸೇವಿಸಿದ ಪರಿಣಾಮ ಸಾವು ಸಂಭವಿಸಿರುವುದಾಗಿ ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿದುಬಂದಿದೆ. ಮನೆಯಲ್ಲಿ ಇವರೊಬ್ಬರೇ ವಾಸಿಸುತ್ತಿದ್ದು, ಮನೆಯವರೆಲ್ಲರೂ ಬೆಂಗಳೂರಿನ ಸಹೋದರಿ ಮನೆಯಲ್ಲಿ ವಾಸವಿದ್ದಾರೆ. ಆದೂರು ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

