ಕಾಸರಗೋಡು: ಗಾಂಜಾ ಸಾಗಾಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಪೊಲೀಸರಿಂದ ತಲೆಮರೆಸಿಕೊಂಡಿದ್ದ ವರ್ಕಾಡಿ ಪಂಚಾಯಿತಿ ಕೊಡ್ಲಮೊಗರು ಗುವೆದ ಪಟ್ಟು ನಿವಾಸಿ ಅಬ್ದುಲ್ ನೌಫಲ್ (25)ನನ್ನು ಮಂಜೇಶ್ವರ ಠಾಣೆ ಪೊಲೀಸರು ಬೆಂಗಳೂರಿನ ವಿಮಾಣ ನಿಲ್ದಾಣ ವಠಾರದಿಂದ ಬಂಧಿಸಿದ್ದಾರೆ. ಈತನಿಗೆ ನ್ಯಾಐಆಂಗ ಬಂಧನ ವಿಧಿಸಲಾಗಿದೆ.
ಈತ ಕಾರಿನಲ್ಲಿ ಸಾಗಿಸಿದ 142 ಕಿಲೋ ಗಾಂಜಾ ಹಾಗೂ 27.5 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಠಾಣೆ ಪೆÇಲೀಸರು ದಾಖಲಿಸಿಕೊಂಡಿದ್ದ ಪ್ರಕರಣದ ವಾರಂಟ್ ಆರೋಪಿಯಾಗಿದ್ದನು. ಪ್ರಸಕ್ತ ಪ್ರಕರಣದಲ್ಲಿ ಜಾಮೀನಿನಲ್ಲಿ ಹೊರಬಂದ ನಂತರ ತಲೆಮರೆಸಿಕೊಂಡಿದ್ದನು. 2021 ಮಾರ್ಚ್ 26ರಂದು ಕಾರಿನಲ್ಲಿ ಸಾಗಿಸುತ್ತಿದ್ದ ಗಾಂಜಾ ವಶಪಡಿಸಲಾಗಿತ್ತು.

