ಮಂಜೇಶ್ವರ: ಮಂಜೇಶ್ವರ ಚೆಕ್ ಪೆÇೀಸ್ಟ್‍ನಲ್ಲಿ ಅಬಕಾರಿ ದಳ ಸಿಬ್ಬಂದಿ ನಡೆಸಿದ ವಾಹನ ತಪಾಸಣೆ ವೇಳೆ ಬಸ್ಸಿನಲ್ಲಿ ಅನಧಿಕೃತವಾಗಿ ಸಾಗಿಸಲೆತ್ನಿಸಿದ ಚಿನ್ನ ವಶಪಡಿಸಿಕೊಂಡು, ಒಬ್ಬನನ್ನು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಸುರ್ಜಿತ್ ಖೋರಾಯ್ ಬಂಧಿತ. ಈತನ ವಶದಲ್ಲಿದ್ದ 595.68 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈತ ಮಂಗಳೂರಿನಿಂದ ಕಾಸರಗೋಡಿಗೆ ಬಸ್ಸಿನಲ್ಲಿ ಆಗಮಿಸುತ್ತಿದ್ದಾಗ ಅಧಿಕಾರಿಗಳು ವಾಡಿಕೆಯಂತೆ ಬಸ್ ತಡೆದು ತಪಾಸಣೆ ನಡೆಸುವ ವೇಳೆ ಚಿನ್ನ ಪತ್ತೆಯಾಗಿದೆ. ಮುಂದಿನ ಕ್ರಮಗಳಿಗಾಗಿ ಪ್ರಕರಣವನ್ನು ರಾಜ್ಯ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಇಲಾಖೆಯ ಜಾರಿ ನಿರ್ದೇಶನಾಲಯ(ಎನ್‍ಫೋರ್ಸ್‍ಮೆಂಟ್ ಸ್ಕ್ವೇಡ್)ಕ್ಕೆ ಹಸ್ತಾಂತರಿಸಲಾಗಿದೆ. ಮಂಜೇಶ್ವರ ಅಬಕಾರಿ ಚೆಕ್ ಪೆÇೀಸ್ಟ್ ಸರ್ಕಲ್ ಇನ್ಸ್‍ಪೆಕ್ಟರ್ ಪಿ.ಎ. ಜೋಸೆಫ್ ನೇತೃತ್ವದಲ್ಲಿ ಕಾರ್ಯಾಚರಣೆ ಡನೆಸಲಾಗಿದೆ.


