ತಿರುವನಂತಪುರ: ಕೇರಳಂನಲ್ಲಿ ಈ ವರ್ಷ ಜನವರಿಯಿಂದ ಈವರೆಗೆ ಶಿಗೆಲ್ಲಾ ಸೋಂಕಿನ 146 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವ ಕೆ. ಮುರಳೀಧರನ್ ತಿಳಿಸಿದ್ದಾರೆ.
ಈ ಪೈಕಿ 70 ಪ್ರಕರಣಗಳು ಜೂನ್ ತಿಂಗಳಲ್ಲೇ ದಾಖಲಾಗಿವೆ ಎಂದು ಅವರು ಮಂಗಳವಾರ ಖಚಿತಪಡಿಸಿದ್ದಾರೆ.
ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಗೆಲ್ಲಾ ಸೋಂಕಿನಿಂದಾಗಿ ಈವರೆಗೆ ಐದು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ನಾಲ್ಕು ಸಾವುಗಳು ಜೂನ್ ತಿಂಗಳಲ್ಲೇ ದಾಖಲಾಗಿವೆ ಎಂದು ಹೇಳಿದ್ದಾರೆ.
ಕೋಯಿಕ್ಕೋಡ್ ಜಿಲ್ಲೆಯಲ್ಲಿ ಅತಿ ಹೆಚ್ಚು 74, ಮಲ್ಲಪ್ಪುರ ಹಾಗೂ ತಿರುವನಂತಪುರ ಜಿಲ್ಲೆಯಲ್ಲಿ ತಲಾ 25 ಶಿಗೆಲ್ಲಾ ಸೋಂಕು ಪ್ರಕರಣಗಳು ದೃಢಪಟ್ಟಿವೆ.
ಪತ್ತಣಂತಿಟ್ಟ, ಪಾಲಕ್ಕಾಡ್ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

