HEALTH TIPS

ತಾಂತ್ರಿಕ ದೋಷ: ಕಣ್ಣೂರಿನಿಂದ ಜಿದ್ದಾಗೆ ಹೊರಟ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ 2 ಗಂಟೆಗಳಲ್ಲಿ ವಾಪಸ್

 ಕಣ್ಣೂರು: ಕಣ್ಣೂರು ವಿಮಾನ ನಿಲ್ದಾಣದಿಂದ ಜಿದ್ದಾಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ತಾಂತ್ರಿಕ ದೋಷದ ಕಾರಣದಿಂದ ಹೊರಟ ಎರಡೇ ಗಂಟೆಗಳಲ್ಲಿ ವಾಪಸ್ ಮರಳಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.


ಮೂಲಗಳ ಪ್ರಕಾರ, 180ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನವು ಬೆಳಿಗ್ಗೆ 7.40ಕ್ಕೆ ಕಣ್ಣೂರು ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿತ್ತು.

ಆದರೆ, ಹಾರಾಟದ ಸುಮಾರು ಎರಡು ಗಂಟೆಗಳ ನಂತರ ಪೈಲಟ್ ಗಳಿಗೆ ತಾಂತ್ರಿಕ ದೋಷವೊಂದು ಕಂಡುಬಂದಿದ್ದು, ಕೂಡಲೇ ವಾಪಸ್ ಮರಳಲು ನಿರ್ಧರಿಸಿದರು.

"ವಿಮಾನವು ಕಣ್ಣೂರಿನಲ್ಲಿ ಸುರಕ್ಷಿತವಾಗಿ ಇಳಿದಿದೆ. ವಿಮಾನದಲ್ಲಿ ಉಂಟಾಗಿದ್ದ ತಾಂತ್ರಿಕ ತೊಂದರೆ ಏನು ಎಂಬುದು ಈಗಷ್ಟೇ ತನಿಖೆಯಿಂದ ತಿಳಿಯಬೇಕಿದೆ" ಎಂದು ಮೂಲಗಳು ತಿಳಿಸಿವೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries