HEALTH TIPS

ಭಾರತೀಯ ನೌಕಾಪಡೆಯ ರೋಚಕ ಕಾರ್ಯಚರಣೆ: 14 ದಿನ ಹಡಗಿನಲ್ಲಿದ್ದ ಕ್ಷಿಪಣಿ ಸಿಡಿತಲೆ ಹೊರತೆಗೆದ ಸೇನೆ!

ಕೊಚ್ಚಿ: ಮೇ 26ರಂದು ವಾಯುದಾಳಿಗೆ ತುತ್ತಾಗಿದ್ದ ನೌಕೆಯೊಂದರ ಇಂಧನ ಟ್ಯಾಂಕ್‌ನಲ್ಲಿ ಸ್ಫೋಟಿಸದೆ ಇದ್ದ ಕ್ಷಿಪಣಿ(Missile)ಯ ಸಿಡಿತಲೆಯನ್ನು ಭಾರತೀಯ ನೌಕಾಪಡೆ ಯಶಸ್ವಿಯಾಗಿ ಹೊರತೆಗೆದಿದೆ.

ಕೇರಳದ ಕೊಚ್ಚಿ ಕಡೆ ಹೊರಟಿದ್ದ ನೌಕೆ ಯುಎಇಯಿಂದ ತೈಲ ಹೊತ್ತು ಕೇರಳದ ಕೊಚ್ಚಿ ಕಡೆ ಹೊರಟಿದ್ದ ಮಾರ್ಶಲ್‌ ದ್ವೀಪದ ಧ್ವಜವಿದ್ದ ಎಂಪಿ ಒಲಿಂಪಿಕ್‌ ಲೈಫ್‌ ಹಡಗಿನ ಮೇಲೆ ಒಮಾನ್‌ ಕರಾವಳಿಯಲ್ಲಿ ದಾಳಿಯಾಗಿತ್ತು.

ಕ್ಷಿಪಣಿಯೊಂದು ಹಲವು ವಿಭಾಗಗಳನ್ನು ಭೇದಿಸಿ ಇಂಧನ ಸಂಗ್ರಹಿಸಿಟ್ಟಿದ್ದ ವಿಭಾಗವನ್ನು ಹೊಕ್ಕಿತ್ತು. ಇದರ ಹೊರತಾಗಿಯೂ ನೌಕೆ 2 ಸಾವಿರ ಕಿ.ಮೀ. ಪ್ರಯಾಣಿಸಿ ಕೊಚ್ಚಿಯನ್ನು ತಲುಪಿತ್ತು.

ವಿಶೇಷ ಸ್ಫೋಟಕ ವಿಲೇವಾರಿ ತಂಡ(Special Explosive Ordnance Disposal Team)

ಇಲ್ಲಿ ವಿಶೇಷ ಸ್ಫೋಟಕ ವಿಲೇವಾರಿ ತಂಡ(Special Explosive Ordnance Disposal Team)ದ ಸಿಬ್ಬಂದಿ ಸಿಡಿತಲೆಯನ್ನು ಜತನದಿಂದ ಹೊರತೆಗೆದು ನಿಷ್ಕ್ರಿಯಗೊಳಿಸಿದ್ದಾರೆ. ಈ ಬಗ್ಗೆ ರಕ್ಷಣಾ ಸಚಿವಾಲಯ ಜೂ.11ರಂದು ಮಾಹಿತಿ ನೀಡಿದ್ದು, 'ವಿಶೇಷ ಕಾಳಜಿಯಿಂದ ಯೋಜಿಸಿ ಕೈಗೊಳ್ಳಲಾದ ಅಪಾಯಕಾರಿ ಕಾರ್ಯಾಚರಣೆ' ಎಂದು ಇದನ್ನು ಬಣ್ಣಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries