HEALTH TIPS

1.6 ಲಕ್ಷ ವಿದ್ಯಾರ್ಥಿಗಳಿಂದ ಅರ್ಜಿ; ಮರು ಮೌಲ್ಯಮಾಪನ ಸಮಸ್ಯೆ ಬಗೆಹರಿದಿದೆ: CBSE

ನವದೆಹಲಿ: '12ನೇ ತರಗತಿಯ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಪೋರ್ಟಲ್‌ ಈಗ ಸಮರ್ಪಕವಾಗಿದ್ದು, ನಿಗದಿತ ಅರ್ಜಿ ಸಲ್ಲಿಕೆಯ ಅವಧಿ ಮುಗಿದಿದೆ. ಈ ಸಂದರ್ಭದಲ್ಲಿ 3.8 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳನ್ನು ಪಡೆದುಕೊಳ್ಳಲು 1.6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ' ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ತಿಳಿಸಿದೆ.

'ಸರ್ಕಾರದ ತಾಂತ್ರಿಕ ಸಂಸ್ಥೆಗಳು ಹಾಗೂ ಐಐಟಿ ತಂಡದ ಮೇಲ್ವಿಚಾರಣೆಯಲ್ಲಿ ಜೂನ್‌ 2ರಿಂದ 7ರ ನಿಗದಿತ ಅವಧಿಯಲ್ಲಿ ಪರಿಶೀಲನೆ ಹಾಗೂ ಮರುಮೌಲ್ಯಮಾಪನ ವಿಭಾಗವು ಸಂಪೂರ್ಣವಾಗಿ ಕಾರ್ಯನಿರ್ವಹಿಸಿದೆ' ಎಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

'ದುರುದ್ದೇಶಪೂರ್ವಕವಾಗಿ ಸೇವೆಗೆ ತಡೆಯೊಡ್ಡುವವರು ಹಾಗೂ ಸೈಬರ್‌ ಅಪಾಯ ಎಸಗುವವರನ್ನು ಎದುರಿಸಲು ಇಡೀ ತಂಡ ನಿರಂತರವಾಗಿ ಸಕ್ರಿಯವಾಗಿತ್ತು. ಯಾವುದೇ ಸಮಸ್ಯೆ ಎದುರಾದರೂ ನೆರವಾಗಲು ವಿದ್ಯಾರ್ಥಿಗಳಿಗೆ ಸಹಾಯವಾಣಿ ಹಾಗೂ ಕುಂದುಕೊರತೆ ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು' ಎಂದು ಮಂಡಳಿ ತಿಳಿಸಿದೆ.

ಫಲಿತಾಂಶದ ಬಳಿಕವೂ ಸೇವೆಯನ್ನು ಪಡೆಯಲು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ ಎಂದು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾದ ಕುರಿತಂತೆ ಸಿಬಿಎಸ್‌ಇ ಈ ಸ್ಪಷ್ಟನೆ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries