ಪೆರ್ಲ: ಎಣ್ಮಕಜೆ ಗ್ರಾಪಂ ವ್ಯಾಪ್ತಿಯ ಉದ್ಯಮಗಳಿಗೆ 2026-27 ಆರ್ಥಿಕ ವರ್ಷದ ಪರವಾನಗಿ ಪಡೆಯಲು ಹಾಗೂ ಪರವಾನಗಿಗಳನ್ನು ನವೀಕರಿಸಲು ಜೂ.17, 18 ರಂದು ಪರವಾನಗಿ ಅದಾಲತ್ ಹಮ್ಮಿಕೊಳ್ಳಲಾಗಿದೆ. ಕೆ-ಸ್ಮಾರ್ಟ್ ಮೂಲಕ ತಕ್ಷಣ ಪರವಾನಗಿಗಳನ್ನು ನೀಡಲಾಗುವುದು. ಉದ್ಯಮಿಗಳು ಆಧಾರ್ ಕಾರ್ಡ್, ಪಾಸ್ ಪೋರ್ಟ್ ಗಾತ್ರದ ಪೋಟೋ, 2026-27ರ ಬಾಡಿಗೆ ಒಪ್ಪಂದ ಪತ್ರ, ಹಸಿರು ಕ್ರಿಯಾ ಸಮಿತಿ ಬಳಕೆದಾರ ಶುಲ್ಕದ ಕಾರ್ಡ್, ತ್ಯಾಜ್ಯ ಬಿನ್ - ಅಫಿದವಿತ್, ಕೈಗಾರಿಕೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ನೋಂದಣಿ, ಹಳೆಯ ಪರವಾನಗಿ (ನವೀಕರಣ), ಆಹಾರೋದ್ಯಮಗಳಿಗೆ ನೀರಿನ ಗುಣಮಟ್ಟ ವರದಿ ಮತ್ತು ವೈದ್ಯಕೀಯ ಪ್ರಮಾಣಪತ್ರಗಳನ್ನು ಹಾಜರುಪಡಿಸಬೇಕು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳುವಂತೆ ಪಂಚಾಯಿತಿ ಪ್ರಕಟಣೆ ತಿಳಿಸಿದೆ.

