ಕಾಸರಗೋಡು: ಜಿಲ್ಲಾ ವಾರ್ತಾ ಮತ್ತು ಮಾಹಿತಿ ಇಲಾಖೆಯಲ್ಲಿ ವಿಡಿಯೋ ಸ್ಟ್ರಿಂಗರ್ ಪ್ಯಾನೆಲ್‍ಗೆ ಅರ್ಜಿ ಆಹ್ವಾನಿಸಲಾಗಿದೆ. ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಕೆಲಸದ ಅನುಭವ ಹೊಂದಿದ್ದು, ಸುದ್ದಿ ಕ್ಲಿಪ್‍ಗಳನ್ನು ಶೂಟ್ ಮಾಡಿ, ಎಡಿಟ್ ಮಾಡಿ, ವಾಯ್ಸ್ ಓವರ್ ನೀಡಿ ಸುದ್ದಿ ಕಥೆಯಾಗಿ (ಓeತಿs Sಣoಡಿಥಿ) ಪ್ರಸ್ತುತಪಡಿಸುವಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಅಗತ್ಯವಿದೆ. ಈಗಾಗಲೇ ಪಿ.ಆರ್.ಡಿಯಲ್ಲಿ ಕೆಲಸದ ಅನುಭವ ಇರುವವರಿಗೆ ಮತ್ತು ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳಲ್ಲಿ ವಿಡಿಯೋಗ್ರಫಿ/ವಿಡಿಯೋ ಎಡಿಟಿಂಗ್‍ನಲ್ಲಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು.
ಅಭ್ಯರ್ಥಿಗಳು ಸ್ವಂತ ಫುಲ್ ಹೆಚ್.ಡಿ (ಈuಟಟ ಊಆ) ಪೆÇ್ರಫೆಷನಲ್ ಕ್ಯಾಮೆರಾ ಮತ್ತು ಆಧುನಿಕ ಪೂರಕ ಪರಿಕರಗಳನ್ನು ಹೊಂದಿದ್ದು, ದೃಶ್ಯಗಳನ್ನು ವೇಗವಾಗಿ ಎಡಿಟ್ ಮಾಡಲು ತಾಂತ್ರಿಕ ಜ್ಞಾನ ಮತ್ತು ಪೆÇ್ರಫೆಷನಲ್ ಎಡಿಟಿಂಗ್ ಸಾಫ್ಟ್‍ವೇರ್ ಹೊಂದಿರುವ ಲ್ಯಾಪ್‍ಟಾಪ್ ಹೊಂದಿರಬೇಕು. ದೃಶ್ಯಗಳನ್ನು ತಕ್ಷಣವೇ ನಿಗದಿಪಡಿಸಿದ ಸರ್ವರ್‍ಗೆ ಕಳುಹಿಸುವ ವ್ಯವಸ್ಥೆಯನ್ನು ಇದರಲ್ಲಿ ಹೊಂದಿರಬೇಕು. ಎಡಿಟ್ ಸೂಟ್, ಆಧುನಿಕ ಎಲೆಕ್ಟ್ರಾನಿಕ್ ನ್ಯೂಸ್ ಗ್ಯಾದರಿಂಗ್ (ಇಓಉ) ಸೌಲಭ್ಯಗಳು ಸ್ವಂತದ್ದಾಗಿದ್ದರೆ ಅದನ್ನು ಹೆಚ್ಚುವರಿ ಅರ್ಹತೆಯಾಗಿ ಪರಿಗಣಿಸಲಾಗುವುದು. ಲೈವ್ ವಿಡಿಯೋ ಟ್ರಾನ್ಸ್‍ಮಿಷನ್, ಸ್ವಂತ ಬ್ಯಾಕ್‍ಪ್ಯಾಕ್ ಪೆÇೀರ್ಟಬಲ್ ವಿಡಿಯೋ ಟ್ರಾನ್ಸ್‍ಮಿಟರ್ ವ್ಯವಸ್ಥೆ ಇರುವವರಿಗೆ ಆದ್ಯತೆ ಇರುತ್ತದೆ.
ಯಾವುದೇ ಕಾರ್ಯಕ್ರಮ ಕಳೆದ ಅರ್ಧ ತಾಸಿನೊಳಗೆ ವಾಟ್ಸಾಪ್, ಟೆಲಿಗ್ರಾಂ, ಜಿಲ್ಲಾ ಮಾಹಿತಿ ಅಧಿಕಾರಿ ಸೂಚಿಸುವ ಮಾಧ್ಯಮಗಳ ಮೂಲಕ ವಿಡಿಯೋವನ್ನು ತಲುಪಿಸಬೇಕು.
ಅರ್ಜಿದಾರರು ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಯಾ ಶಿಕ್ಷೆಗೊಳಗಾಗಿರಬಾರದು ಅಥವಾ ಕ್ರಿಮಿನಲ್ ಹಿನ್ನೆಲೆ ಹೊಂದಿರಬಾರದು. ಅಭ್ಯರ್ಥಿಗಳು ತಮ್ಮ ಹೆಸರು, ಮನೆ ವಿಳಾಸ, ವಿದ್ಯಾರ್ಹತೆ, ಫೆÇೀನ್ ನಂಬರ್, ಇ-ಮೇಲ್ ವಿಳಾಸ, ತಮ್ಮ ಬಳಿ ಇರುವ ವಿಡಿಯೋಗ್ರಫಿ ಉಪಕರಣಗಳ ವಿವರ ಮತ್ತು ಅನುಭವದ ವಿವರಗಳನ್ನು ಒಳಗೊಂಡ ಅರ್ಜಿ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಜೂನ್ 18ರ ಮುಂಚಿತವಾಗಿ 'ಜಿಲ್ಲಾ ಮಾಹಿತಿ ಕಚೇರಿ, ಸಿವಿಲ್ ಸ್ಟೇಷನ್,ವಿದ್ಯಾನಗರ್, ಕಾಸರಗೋಡು ಎಂಬ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ಕಳುಹಿಸಿಕೊಡಬೇಕು. ಅರ್ಜಿದಾರರು ತಾವು ವಾಸಿಸುವ ವ್ಯಾಪ್ತಿಯ ಪೆÇಲೀಸ್ ಠಾಣೆ ಅಧಿಕರಿಯಿಂದ ಪಡೆದ ನಡತೆ ಪ್ರಮಾಣಪತ್ರ ಕಡಡಾಯವಗಿ ಲಗತ್ತಿಸಿರಬೇಕು ಎಂದು ಪ್ರಕಟಣೆ ತಿಳಿಸಿದೆ.

