ಕುಂಬಳೆ: ಕುಂಬಳೆ ಗ್ರಾಮ ಪಂಚಾಯಿತಿಯ ನಾಲ್ಕು, ಐದು ಮತ್ತು ಹನ್ನೆರಡನೇ ವಾರ್ಡ್‍ಗಳಲ್ಲಿ ಆಶಾ ಕಾರ್ಯಕರ್ತೆಯರ ಆಯ್ಕೆಗೆ ನಿರ್ದಿಷ್ಟ ಅರ್ಹತೆ ಹೊಂದಿರುವ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹತೆಗಳು- 10 ನೇ ತರಗತಿ ಶಿಕ್ಷಣದಲ್ಲಿ ಉತ್ತೀರ್ಣರಾಗಿರಬೇಕು. ವಿವಾಹಿತ ಮಹಿಳೆಯರು ಮಾತ್ರ ಅರ್ಹರು. ವಯಸ್ಸು 25 ರಿಂದ 45 ವರ್ಷ ವಯಸ್ಸಿನವರಾಗಿರಬೇಕು. ಸಂಬಂಧಪಟ್ಟ ವಾರ್ಡ್‍ಗಳಲ್ಲಿ ವಾಸಿಸುತ್ತಿರಬೇಕು. ಕೆಲಸದ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ಜೂನ್ 22 ಸೋಮವಾರ ಬೆಳಿಗ್ಗೆ 10.30 ಕ್ಕೆ ಕುಂಬಳೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯುವ ಸಂದರ್ಶನಕ್ಕೆ ಮೂಲ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾಗಬೇಕು ಎಂದು ತಿಳಿಸಲಾಗಿದೆ. ಮಾಹಿತಿಗಳಿಗೆ ದೂರವಾಣಿ- 04998 213033, +91 9496049717 ಸಂಪರ್ಕಿಸಬಹುದು.

