ಮೌರುಮೌಲ್ಯಮಾಪನ ಹಾಗೂ ದೃಢೀಕರಣ ಪ್ರಕ್ರಿಯೆಗೆ ಅರ್ಜಿ ಸಲ್ಲಿಕೆಗಾಗಿ ಆರಂಭಗೊಂಡ ಸಿಬಿಎಸ್‌ಇನ ಪೋರ್ಟಲ್ ಬೆಳಗ್ಗೆ 7ರಿಂದ ಸಾಮಾನ್ಯವಾಗಿ ಕಾರ್ಯನಿರ್ವಹಿಸತೊಡಗಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಿಬಿಐಎಸ್‌ಇ ಈ ಬಗ್ಗೆ ಮಾಹಿತಿ ನೀಡಿದ್ದು, ತನ್ನ ಡಿಜಿಟಲ್ ವೇದಿಕೆಯು ಬೃಹತ್ ಪ್ರಮಾಣದಲ್ಲಿ ಸೇವೆ ನಿರಾಕರಣೆ(ಡಿಓಎಸ್)ಯ ದಾಳಿಗೆ ತುತ್ತಾಗಿದ್ದು, ಇದರ ಪರಿಣಾಮವಾಗಿ ಕೇವಲ ಎರಡು ನಿಮಿಷಗಳಲ್ಲಿ 10.5 ಲಕ್ಷ ಹಿಟ್ಸ್‌ಗಳು ಸೃಷ್ಟಿಯಾಗಿರುವುದಾಗಿ ಅದು ತಿಳಿಸಿದೆ. ಅಲ್ಲದೆ ಸಿಸ್ಟಮ್‌ನಲ್ಲಿರುವ ಫೈಲ್‌ಗಳನ್ನು ಅನಧಿಕೃತವಾಗಿ ಸಂಪರ್ಕಿಸಲು ಒಂದು ಲಕ್ಷಕ್ಕೂ ಅಧಿಕ ಯತ್ನಗಳು ನಡೆದಿರುವುದು ಕೂಡಾ ದಾಖಲಾಗಿದೆಯೆಂದು ಸಿಬಿಎಸ್‌ಇ ತಿಳಿಸಿದೆ.
ಸಿಬಿಎಸ್‌ಇ-ಮರುಮೌಲ್ಯಮಾಪನದ ಪೋರ್ಟಲ್ ಅನ್ನು ಇಂದು ಸಹಸ್ರಾರು ವಿದ್ಯಾರ್ಥಿಗಳು ಸಂಪರ್ಕಿಸಿದ್ದು, ಕೆಲವು ಕಿಡಿಗೇಡಿಗಳು ಸತತ ಸೈಬರ್‌ದಾಳಿಗಳ ಮೂಲಕ ಸೇವೆಗಳಿಗೆ ಅಡ್ಡಿಪಡಿಸಲು ಯತ್ನಿಸಿದ್ದಾರೆಂದು ಮಂಡಳಿಯು ತಿಳಿಸಿದೆ.
ಈ ಘಟನೆಗಳ ಹೊರತಾಗಿಯೂ ಆ ಪೋರ್ಟಲ್ ಬಳಕೆದಾರರ ಅಗಾಧ ದಟ್ಟಣೆಯನ್ನು ಅತ್ಯಂತ ದಕ್ಷವಾಗಿ ನಿರ್ವಹಿಸಿದೆ. ಈ ಪ್ಲ್ಯಾಟ್‌ಫಾರಂ ಏಕಕಾಲದಲ್ಲಿ 8 ಲಕ್ಷಕ್ಕೂ ಅಧಿಕ ಬಳಕೆದಾರನ್ನು ಏಕಕಾಲದಲ್ಲಿ ನಿರ್ವಹಿಸಿದೆ ಹಾಗೂ ಸಂಜೆ ಮೂರು ಗಂಟೆಯೊಳಗೆ 18 ಸಾವಿರಕ್ಕೂ ಅಧಿಕ ಮರುಮೌಲ್ಯಮಾಪನ ಹಾಗೂ ದೃಢೀಕರಣ ಅರ್ಜಿಗಳ ಸಂಸ್ಕರಣೆಯನ್ನು ಮಾಡಿರುವುದಾಗಿ ಸಿಬಿಎಸ್‌ಇ ಹೇಳಿಕೆ ತಿಳಿಸಿದೆ.

