HEALTH TIPS

'ಇಂಡಿಯಾ ಜನಬಂಧನ್' ಸಭೆಯಲ್ಲಿ 23 ಪಕ್ಷಗಳು ಭಾಗವಹಿಸಲಿವೆ: ಕಾಂಗ್ರೆಸ್

ನವದೆಹಲಿ: ಇಲ್ಲಿನ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಸೋಮವಾರ ನಡೆಯಲಿರುವ 'ಇಂಡಿಯಾ ಜನಬಂಧನ್' ಸಭೆಯಲ್ಲಿ 23 ಪಕ್ಷಗಳು ಭಾಗವಹಿಸುವುದಾಗಿ ತಿಳಿಸಿವೆ ಎಂದು ಕಾಂಗ್ರೆಸ್ ಹೇಳಿದೆ ವಿರೋಧ ಪಕ್ಷಗಳು ತಮ್ಮ ವೈವಿಧ್ಯತೆಯ ಮೂಲಕ ಒಗ್ಗಟ್ಟಿನಿಂದ ಇವೆ ಎಂದು ಅದು ಪ್ರತಿಪಾದಿಸಿದೆ.

ತಮ್ಮದೇ ಆದ ಕಾರಣಗಳಿಂದ ಕೆಲ ಪಕ್ಷಗಳು ಈ ಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಕುರಿತ ಪೋಸ್ಟ್‌ ಮಾಡಿರುವ ಅವರು, 'ಜೂನ್ 8 ರಂದು ಸೋಮವಾರ ಮಧ್ಯಾಹ್ನ 12 ಗಂಟೆಗೆ ನವದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆಯಲಿರುವ ಇಂಡಿಯಾ ಜನಬಂಧನ್ ಸಭೆಯಲ್ಲಿ 23 ರಾಜಕೀಯ ಪಕ್ಷಗಳು ಭಾಗವಹಿಸುವುದಾಗಿ ದೃಢಪಡಿಸಿವೆ'ಎಂದು ತಿಳಿಸಿದ್ದಾರೆ.

'ಸಾಮಾನ್ಯ ಉದ್ದೇಶ ಮತ್ತು ಸ್ಪಷ್ಟ ಉದ್ದೇಶದೊಂದಿಗೆ ಸಭೆ ನಡೆಯುತ್ತಿದ್ದು, ಇಂಡಿಯಾ ಒಕ್ಕೂಟ ಒಗ್ಗಟ್ಟಾಗಿದೆ. ಸೌಹಾರ್ದತೆಯ ಉತ್ಸಾಹದಲ್ಲಿ ಭೇಟಿಯಾಗಲು ಹಲವು ಪಕ್ಷಗಳು ಎದುರು ನೋಡುತ್ತಿವೆ ಎಂದು ರಮೇಶ್ ಅವರ ಪೋಸ್ಟ್ ಅನ್ನು ಟ್ಯಾಗ್ ಮಾಡಿ ಟಿಎಂಸಿ ಸಂಸದ ಡೆರೆಕ್ ಒಬ್ರಯಾ ಬರೆದುಕೊಂಡಿದ್ದಾರೆ.

ಕೆಲವು ಪಕ್ಷಗಳು ತಮ್ಮದೇ ಕಾರಣಗಳಿಗಾಗಿ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಆದರೂ, ಲಕ್ಷಾಂತರ ಭಾರತೀಯರ ಮತದಾನದ ಹಕ್ಕನ್ನು ಕಸಿದುಕೊಂಡು, ಪ್ರತಿದಿನ ಸಂವಿಧಾನದ ಮೇಲೆ ದಾಳಿ ಮಾಡುತ್ತಾ, ತನಿಖಾ ಸಂಸ್ಥೆಗಳ ಮೂಲಕ ವಿರೋಧ ಪಕ್ಷದ ನಾಯಕರ ಮೇಲೆ ದಾಳಿ ಮಾಡುವ, ನಿರಂತರ ಬೆಲೆ ಏರಿಕೆ ಮೂಲಕ ಕೋಟ್ಯಂತರ ಭಾರತೀಯರ ಜೀವನೋಪಾಯಕ್ಕೆ ಗಂಭೀರ ಹಾನಿ ಮಾಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಇಂಡಿಯಾ ಜನಬಂಧನ್ ಒಗ್ಗಟ್ಟಾಗಿ ಮುಂದುವರಿಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

2029ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೋರಾಟದ ರೂಪುರೇಷೆ ರೂಪಿಸಲು ಇಂಡಿಯಾ ಒಕ್ಕೂಟ ಈ ಸಭ ಕರೆದಿದೆ.

ಎಎಪಿ ಬಹಿರಂಗವಾಗಿ ಇಂಡಿಯಾ ಒಕ್ಕೂಟದಿಮದ ದೂರ ಇರುವುದಾಗಿ ಘೋಷಿಸಿದ್ದು, ಡಿಎಂಕೆ ಸಭೆಯನ್ನು ಬಹಿಷ್ಕರಿಸುವುದಾಗಿ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries