HEALTH TIPS

ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ಭ್ರಷ್ಟಾಚಾರಿಗಳ ವಿರುದ್ಧದ ಹೋರಾಟ; ಟಿಎಂಸಿ ನಾಯಕನ ತಲೆ ಬೋಳಿಸಿ, ಕುತ್ತಿಗೆಗೆ ಶೂ ಹಾರ ಹಾಕಿ ಬೀದಿಯಲ್ಲಿ ಮೆರವಣಿಗೆ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ದಿನನಿತ್ಯ ಏನಾದರೊಂದು ಘಟನೆಗಳು ನಡೆಯುತ್ತಲೇ ಇವೆ. ಅಕ್ರಮ, ಭ್ರಷ್ಟಾಚಾರಗಳ ವಿರುದ್ಧ ಜನಸಾಮಾನ್ಯರು ರಾಜಕಾರಣಿಗಳ ವಿರುದ್ಧ ರೋಸಿ ಹೋಗಿದ್ದಾರೆ. ಇದೀಗ ತೃಣಮೂಲ ಕಾಂಗ್ರೆಸ್ (TMC) ನಾಯಕನ ತಲೆ ಬೋಳಿಸಿ, ಕುತ್ತಿಗೆಗೆ ಶೂಗಳ ಹಾರ ಹಾಕಿ, ಸೊಂಟಕ್ಕೆ ಹಗ್ಗ ಕಟ್ಟಿ ಗ್ರಾಮಸ್ಥರು ಅವರನ್ನು ಮೆರವಣಿಗೆ ಮಾಡಿರುವ ಘಟನೆ ಶ್ಯಾಮ್‌ಪುರದಲ್ಲಿ ನಡೆದಿದೆ.

100 ದಿನಗಳ ಉದ್ಯೋಗ ಯೋಜನೆಯಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಟಿಎಂಸಿ ನಾಯಕನ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ.

ಆಕ್ರೋಶಕ್ಕೆ ತುತ್ತಾದ ನಾಯಕನನ್ನು ಸನ್ಯಾಸಿ ಮನ್ನಾ ಎಂದು ಗುರುತಿಸಲಾಗಿದೆ. ನಂತರ ಪೊಲೀಸರು ಅವರನ್ನು ಜನಸಂದಣಿಯಿಂದ ರಕ್ಷಿಸಿ ವಶಕ್ಕೆ ಪಡೆದರು. 100 ದಿನಗಳ ಕೆಲಸದ ಯೋಜನೆ ಮನರೇಗಾಕ್ಕೆ ಸಂಬಂಧಿಸಿದಂತೆ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ನಿವಾಸಿಗಳು ಬಹಳ ಹಿಂದಿನಿಂದಲೂ ಆರೋಪಿಸುತ್ತಿದ್ದರು. ಯೋಜನೆಯ ಫಲಾನುಭವಿಗಳಿಗೆ ಮೀಸಲಾದ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಬಗ್ಗೆ ಗ್ರಾಮಸ್ಥರು ಸಿಟ್ಟಿಗೆದ್ದಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ನೆರೆದ ಗ್ರಾಮಸ್ಥರು ಮನ್ನಾ ಅವರನ್ನು ಸುತ್ತುವರಿದು ಪ್ರತಿಭಟನೆ ನಡೆಸಿದರು ಎನ್ನಲಾಗಿದೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಜನಸಮೂಹ ಅವರ ತಲೆ ಬೋಳಿಸಿದರು. ನಂತರ ಕುತ್ತಿಗೆಗೆ ಶೂಗಳ ಹಾರ ಹಾಕಿ, ಸೊಂಟಕ್ಕೆ ಹಗ್ಗ ಕಟ್ಟಿ ಅವರನ್ನು ಆ ಪ್ರದೇಶದ ಮೂಲಕ ಮೆರವಣಿಗೆ ಮಾಡಿದರು. ಬಡ ನಾಗರಿಕರಿಗೆ ಮೀಸಲಾದ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಜನರು ಇಂತಹ ಶಿಕ್ಷೆಗೆ ಅರ್ಹರು ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು.

ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಶ್ಯಾಮಪುರ ಪೊಲೀಸರು ಸ್ಥಳಕ್ಕೆ ತಲುಪಿದರು. ಮಧ್ಯ ಪ್ರವೇಶಿಸಿದ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು, ಜನಸಂದಣಿಯಿಂದ ಮನ್ನಾ ಅವರನ್ನು ರಕ್ಷಿಸಿ, ಪೊಲೀಸ್ ಠಾಣೆಗೆ ಕರೆದೊಯ್ದರು.

ರೌಡಿಗಳ ಹೆಡೆಮುರಿ ಕಟ್ಟಿ ಅರೆಬೆತ್ತಲೆ ಮೆರವಣಿಗೆ ನಡೆಸಿದ್ದ ಪೊಲೀಸರು

ಪಶ್ಚಿಮ ಬಂಗಾಳದಲ್ಲಿ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಸುವೇಂದು ಅಧಿಕಾರಿ ಅಧಿಕಾರ ವಹಿಸಿಕೊಂಡ ಮೇಲೆ ಅಪರಾಧಿಗಳನ್ನು ಬೆದರಿಸಲು ಮತ್ತು ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ನಂಬಿಕೆಯನ್ನು ಬೆಳೆಸಲು, ರೌಡಿಗಳ ಹೆಡೆಮುರಿ ಕಟ್ಟಿ ಅರೆಬೆತ್ತಲೆ ಮೆರವಣಿಗೆ ನಡೆಸಲಾಗಿತ್ತು.

ಬಂಗಾಳದ ಉತ್ತರ, ದಕ್ಷಿಣ ಮತ್ತು ಮಧ್ಯ ಹೌರಾದ ಬೀದಿಗಳಲ್ಲಿ ಅರೆನಗ್ನ ಸ್ಥಿತಿಯಲ್ಲಿ ಬಂಧಿತ ಪ್ರತಿಯೊಬ್ಬ ಅಪರಾಧಿಯನ್ನು ಕೂಡ ಮೆರವಣಿಗೆ ಮಾಡಲಾಗಿತ್ತು. ಅಪರಾಧಿಗಳ ಬಂಧನದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ಮರುದಿನದಿಂದ ಅವರು ಕಾರ್ಯನಿರ್ವಹಿಸುತ್ತಿದ್ದ ಸ್ಥಳಗಳಲ್ಲಿ ಮೆರವಣಿಗೆ ನಡೆಸಲಾಗಿತ್ತು.

ಇತ್ತೀಚೆಗೆ ಉತ್ತರ ಹೌರಾದ ಕುಖ್ಯಾತ 'ಡಾನ್' ಎಂದು ಕರೆಯಲ್ಪಡುತ್ತಿದ್ದ ಆಕಾಶ್ ಸಿಂಗ್ ಎಂಬಾತನ ತಲೆ ಬೋಳಿಸಿ ತೋಳಿಲ್ಲದ ಜಾಕೆಟ್ ಮತ್ತು ಒಳ ಉಡುಪುಗಳನ್ನು ಹಾಕಿಸಿ ಪೊಲೀಸರು ಮೆರವಣಿಗೆ ನಡೆಸಿದ್ದರು. ಆತನನ್ನು ಮೇ ಆರಂಭದಲ್ಲಿ ಬಂಧಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries